ಕೊರಟಗೆರೆ: ಎಲ್ಲೆಡೆ ಜೆಡಿಎಸ್‌ಗೆ ಬೆಂಬಲ: ಸುಧಾಕರ್
ತುಮಕೂರು: ಕೊರಟಗೆರೆ ಕ್ಷೇತ್ರದೆಲ್ಲೆಡೆ ಜೆಡಿಎಸ್‌ಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅಭ್ಯರ್ಥಿ ಪಿ.ಆರ್. ಸುಧಾಕರ್ ಲಾಲ್ ಹೇಳಿದರು.
ಅವರು ಸೋಮವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ತುಮಕೂರು ತಾಲೂಕಿನ ಬೆಳಧರ ಮತ್ತು ಓಬಳಾಪುರ ಪಂಚಾಯ್ತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಜೆಡಿಎಸ್‌ಗೆ ಕೇವಲ ಒಂದು ಜಾತಿಯ ಜನರು ಮಾತ್ರ ಬೆಂಬಲಿಸುತ್ತಿಲ, ಎಲ್ಲಾ ಸಮುದಾಯದವರು ಜಾತ್ಯತೀತವಾಗಿ ಬೆಂಬಲಿಸುತ್ತಿದ್ದು ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವಾಗಿದ್ದು ನಾವು ಮತಯಾಚನೆ ಮಾಡಲು ತೆರಳಿದ ಹನುಮಂತಗಿರಿ, ಗೊಲ್ಲಹಳ್ಳಿ, ಮಸಣೀಪಾಳ್ಯ, ಬೆಳಧರ, ಎಡಿಎಸ್ ಪಾಳ್ಯ, ಚನ್ನಗಿರಿ ಜೆಕ್ಕೇನಹಳ್ಳಿ, ಅಗ್ರಹಾರ, ಮಲ್ಲಯ್ಯನಪಾಳ್ಯ, ಗೇರೇಹಳ್ಳಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಹಲವಾರು ಗ್ರಾಮಗಳಲ್ಲಿ ಸರಿಯಾದ ರಸ್ತೆಗಳಿಲ್ಲದೇ ಸಂಪರ್ಕಕ್ಕೆ ತೀವ್ರ ರೀತಿಯ ತೊಂದೆಯಾಗುತ್ತಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ನಮಗೆ ಹೇಳುತ್ತಿದ್ದು ಈ ಸಮಸ್ಯೆಗೆ ನಾವು ಪರಿಹಾರ ಕಲ್ಪಿಸುವ ಸಲುವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ರೀತಿಯ ಅಭಿವೃದ್ಧಿಗಳು ನಡೆದಿವೆ. ಇವುಗಳನ್ನು ಜನರೇ ನಮ್ಮೊಂದಿಗೆ ಮುಕ್ತವಾಗಿ ಹೇಳುತ್ತಿದ್ದಾರೆ. ಈ ಬಾರಿಯೂ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ನಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕು ಎನ್ನುವ ಇಂಗಿತವನ್ನು ಜನರು ಹೇಳುತ್ತಿದ್ದಾರೆ ಎಂದರು.