7 ವರ್ಷದ ಬಾಲೆಗೆ ಅಂತಾರಾಷ್ಟ್ರೀಯ ಜಾದೂ ಬಹುಮಾನ
ಕ.ಪ್ರ.ವಾರ್ತೆ , ಮಂಗಳೂರು , ಏ.23
ಒಡಿಶಾದಲ್ಲಿ ನಡೆದ ಅಂತಾರಾಷ್ಟ್ರೀಯ ಜಾದೂ ಉತ್ಸವದಲ್ಲಿ ಏಳು ವರ್ಷದ ಅಪೂರ್ವ ಮಳಿ ಕಿರಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಒಂದು ವರ್ಷ ಹತ್ತು ತಿಂಗಳಿರುವಾಗಲೇ ಜಾದೂ ಅಭ್ಯಾಸ ಶುರು ಮಾಡಿದ ಅಪೂರ್ವ ಮೂರನೇ ವಯಸ್ಸಿಗಾಗಲೇ ಜಾದೂ ಪ್ರದರ್ಶನ ನೀಡಿದ್ದಾಳೆ ಎಂದು ಜಾದೂಗಾರ ರಾಜೇಶ್ ಮಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೆನರಾ ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿರುವ ಅಪೂರ್ವ ಇದುವರೆಗೆ 400ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಳೆ. 4ನೇ ವಯಸ್ಸಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಉಪ್ಪಿನಂಗಡಿ ಮುಖ್ಯರಸ್ತೆ ಸೇರಿದಂತೆ ಏರಡು ಬಾರಿ ಯಶಸ್ವಿಯಾಗಿ ವಿದ್ಯುತ್ ಚಾಲಿತ ಬೈಕ್ ಚಲಾಯಿಸಿದ್ದಾಳೆ. ಈಕೆ ಸಮರ್ಥ ಶೆಣೈ ಅವರ ಶಿಷ್ಯೆ. ಈಕೆ ಸಹೋದರಿ ಅಂಜನಾ ಮಳಿಯೂ 300ಕ್ಕೂ ಹೆಚ್ಚು ಜಾದೂ ಕಾರ್ಯಕ್ರಮ ನೀಡಿದ್ದಾಳೆ. ಕಾಂಚನ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ಅಪೂರ್ವಳಿಗೆ 'ಇಂದ್ರ ವಿದ್ಯಾ ಚತುರೆ' ಬಿರುದು ಪ್ರದಾನ ಮಾಡಲಾಗಿದೆ.