ಅಲ್ಪಸಂಖ್ಯಾತರ ರಕ್ಷಣೆ ಜೆಡಿಎಸ್ನಿಂದ ಸಾಧ್ಯ
ಕ.ಪ್ರ. ವಾರ್ತೆ ಕುಣಿಗಲ್ ಏ.23
ಕಾಂಗ್ರೆಸ್ಸಿಗರು ಮುಸ್ಲಿಂ ಬಾಂಧವರ ಮತ ಕೇಳುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆ ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ಮುಖಂಡ ಜಮೀರ್ ಅಹಮದ್ ತಿಳಿಸಿದರು. ಮಂಗಳವಾರ, ಪಟ್ಟಣದ ಕೋಟೆ ಪ್ರದೇಶದ ಮಸೀದಿ ಮುಂಭಾಗದಲ್ಲಿ, ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಪರ ರೋಡ್ಶೋ ಮೂಲಕ ಮತಯಾಚನೆ ಮಾಡಿ, ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಮುಸ್ಲಿಂ ಬಾಂಧವರನ್ನು ಕೇವಲ ಮತ ಬ್ಯಾಂಕ್ಗಳನ್ನಾಗಿ ಮಾತ್ರ ಮಾಡಿಕೊಂಡು, ಚುನಾವಣೆ ಸಮಯದಲ್ಲಿ ಅಶ್ವಾಸನೆ ನೀಡುತ್ತಾರೆ. ಈಡೇರಿಕೆಗೆ ಕ್ರಮ ಕೈಗೊಳ್ಳದೆ ಮುಸ್ಲಿಮರ ಸಮಗ್ರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದರು. ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ತಾವೇ ವಕ್ಫ್ ಸಚಿವರಾಗಿ, ತಮ್ಮ ಸ್ವಂತ ಖರ್ಚಿನಲ್ಲಿ ಟಿಪ್ಪು ವಿವಿ ಸ್ಥಾಪಿಸುವುದುಗಾ ತಿಳಿಸಿದರು.
ಪಿತೂರಿ: ಕುಣಿಗಲ್ ತಾಲೂಕಿನ ಬಿದನಗೆರೆಯವನಾದ ನಾನು ಮುಸ್ಲಿಂ ಮುಖಂಡನಾಗಿ ಜೆಡಿಎಸ್ ಪಾಳೆಯದಲ್ಲಿ ರಾಜ್ಯಮಟ್ಟದ ನಾಯಕನಾಗಿ ಬೆಳೆದಿರುವುದನ್ನು ಸಹಸದೆ, ತಮ್ಮ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದಾರೆ. ಜನತೆಯ, ದೇವರ ಕೃಪಾಶೀರ್ವಾದದಿಂದ ತಾವು ಆರಿಸಿ ಬರುವುದಾಗಿ ತಿಳಿಸಿ, ಕುಮಾರಸ್ವಾಮಿ 20 ತಿಂಗಳ ಅಲ್ಪಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯವನ್ನಾಳಿದ ಯಾವುದೇ ಸರ್ಕಾರಗಳು ಮಾಡಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗೆ, ಅಲ್ಪಸಂಖ್ಯಾತರ ರಕ್ಷಣೆಗೆ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯನವರನ್ನು ಅತ್ಯಧಿಕ ಮತಗಳಿಂದ ಆರಿಸುವ ಮೂಲಕ ಕುಮಾರಸ್ವಾಮಿ ಯವರನ್ನು ಪುನಃ ಮುಖ್ಯಮಂತ್ರಿಯನ್ನಾಗಿ ಮಾಡಲು ಶ್ರಮಿಸಬೇಕೆಂದರು.
ಮಂಗಳವಾರ ಜಮೀರ್ ಅಹಮದ್ ತಾಲೂಕಿನ ಕೆಂಪನಹಳ್ಳಿ, ಬುಕ್ಕಸಾಗರ, ಬಿದನಗೆರೆ, ಮಲ್ಲಾಘಟ್ಟ, ಪಟ್ಟಣದ ಕೋಟೆ, ಗುಜ್ಜಾರಿ ಮೊಹಲ್ಲಾ, ಸಂತೇಮಾವತ್ತೂರು ಗ್ರಾಮ, ಕೆಂಪನಹಳ್ಳಿ ಗ್ರಾಮ ಹಾಗೂ ಹುಲಿಯೂರುದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚನೆ ಮಾಡಿದರು. ಅಭ್ಯರ್ಥಿ ಡಿ.ನಾಗರಾಜಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಜಿಪಂ ಸದಸ್ಯ ಡಾ.ಬಿ.ಎನ್.ರವಿ, ತಾಪಂ ಸದಸ್ಯ ಜಗದೀಶ್, ಪ್ರಮುಖರಾದ ಆಯಿಶಾಬೀ, ಹಮೀದ್, ಸತೀಶ, ಈ.ಮಂಜು, ಚಂದ್ರಶೇಖರ್, ಸಮೀವುಲ್ಲಾ, ಅಶ್ವಾಖ್, ಶಿವಣ್ಣ, ನಾಗರಾಜ್ ಇತರರು ಉಪಸ್ಥಿತರಿದ್ದರು.