ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಬ್ಬರು ಅಬಕಾರಿ ರಕ್ಷಕರ ಅಮಾನತು

Rashmi Kasaragodu
Updated On : 24 Apr 2013, 11:40 am

ತುಮಕೂರು: ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರು ಅಬಕಾರಿ ಉಪ ಆಯುಕ್ತ ಕಚೇರಿಯ ಇಬ್ಬರು ಅಬಕಾರಿ ರಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಆದೇಶಿಸಿದ್ದಾರೆ.
ಚುನಾವಣೆ ಪ್ರಯುಕ್ತ ಮದ್ಯದಂಗಡಿಗಳಿಂದ ನಿರ್ದಿಷ್ಟ ಮದ್ಯ ನೀಡಲು ಒತ್ತಾಯಿಸಿದ್ದಾರೆಂದು ಹಾಗೂ ಉದ್ದೇಶಪೂರ್ವಕವಾಗಿ ಹಣ ಪಡೆದು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆಂದು ಎಚ್.ಆರ್. ನಾಗರಾಜ್ ಹಾಗೂ ಎ.ನಾರಾಯಣಸ್ವಾಮಿ ಎಂಬ ಸನ್ನದುದಾರರು ಜಿಲ್ಲಾಧಿಕಾರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು, ನೌಕರರಾದ ಸಿ. ವೀರಭದ್ರಯ್ಯ, ಟಿ.ಬಿ.ಗುರುಮೂರ್ತಿ ಅವರ ವಿರುದ್ಧದ ದೂರು ಅರ್ಜಿ ಪರಿಶೀಲಿಸಿ ವರದಿ ನೀಡುವಂತೆ ಅಬಕಾರಿ ಉಪ ಆಯುಕ್ತರಿಗೆ ಆದೇಶಿಸಿದ್ದರು.
ಅಬಕಾರಿ ಉಪ ಆಯುಕ್ತರು ನೀಡಿದ ವರದಿಯಲ್ಲಿ ಸದರಿ ನೌಕರರು ಆರೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಚುನಾವಣಾ ಸಂದರ್ಭದಲ್ಲಿ ಈ ಇಬ್ಬರು ನೌಕರರು ಯಾವುದೇ ಅಕ್ರಮದಲ್ಲಿ ಭಾಗಿಯಾಗಿದ್ದು, ಇವರಿಂದ ಇಲಾಖೆಗೆ, ಇಲಾಖೆಯ ಕರ್ತವ್ಯಕ್ಕೆ ಧಕ್ಕೆ ಬಾರದಂತೆ ಹಾಗೂ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತ ಹಾಗೂ ಯಾವುದೇ ಅಬಕಾರಿ ಅಕ್ರಮಗಳು ನಡೆಯದಂತೆ ನಡೆಸುವ ನಿಮಿತ್ತ ಜಿಲ್ಲಾಧಿಕಾರಿಗಳು ಸದರಿ ನೌಕರರನ್ನು ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತುಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement