ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಜೆಪಿ ಗೆಲ್ಲಿಸಿ, ಬಿಎಸ್‌ವೈ ಸಿಎಂ ಮಾಡಿ

Rashmi Kasaragodu
Updated On : 24 Apr 2013, 11:43 am

ಕ.ಪ್ರ. ವಾರ್ತೆ   ತಿಪಟೂರು   ಏ.23
ತಿಪಟೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದು ಯಡಿಯೂರಪ್ಪನವರ ಹೆಸರನ್ನು ಸ್ಮರಿಸದೆ ಬೊಬ್ಬೆಹೊಡೆಯುತ್ತ ಮತ ಯಾಚಿಸುವ ಮೂಲಕ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಮತದಾರರನ್ನು ದಿಕ್ಕುತಪ್ಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಆರೋಪಿಸಿದರು.
 ಒಂದೂವರೆ ಸಾವಿರಕ್ಕೂ ಹೆಚ್ಚು ಕೆಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕೊನೇಹಳ್ಳಿ, ಸಿದ್ದಾಪುರ, ಅಂಚೆಕೊಪ್ಪಲು, ಕರೀಕೆರೆ, ಬಿದರೆಗುಡಿ, ಮಡೆನೂರು, ಶಂಕರಿಕೊಪ್ಪಲು ಸೇರಿದಂತೆ ಹಲವು ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸುತಿದ್ದ ವೇಳೆ ಮಾತನಾಡಿದ ಅವರು ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯವ ನೀರು, ಮೇವು ಹಾಗೂ ಸಮರ್ಪಕ ರಸ್ತೆಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಆಗರವಾಗಿವೆ. ಪ್ರಚಾರ ವೇಳೆಯಲ್ಲಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಪಡಿತರ ಕಾರ್ಡ್, ಮಾಸಾಶನ, ಅಂಗವಿಕಲ, ವಿಧವಾ ವೇತನ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ ಹಾಗೂ ರೈತರ ಜಮೀನುಗಳ ದಾಖಲೆಗಳಿಗಾಗಿ ಪರದಾಡುವಂತಾಗಿರುವ ಸ್ಥಿತಿಗತಿಗಳನ್ನು ಮನನೊಂದು ಹೇಳಿಕೊಳ್ಳುತ್ತಿದ್ದಾರೆ.
 ತಾಲೂಕಿನ ಜೀವನಾಡಿ ಬೆಳೆ ಕೊಬ್ಬರಿ ಬೆಲೆ ಪಾತಾಳ ಸೇರಿದ್ದು, ರೈತರು ಆತ್ಮಹತ್ಯೆಯತ್ತ ಮುಖಮಾಡಿರುವ ದೃಶ್ಯ ಎದ್ದು ಕಾಣುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಯುವ ಶಕ್ತಿ ತುತ್ತು ಅನ್ನಕ್ಕಾಗಿ ಹಳ್ಳಿಗಳನ್ನು ತೊರೆದು ನಗರಗಳತ್ತ ಗುಳೆ ಹೋಗಿ ವಯೋವೃದ್ಧರು ಮಾತ್ರ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೇವಲ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳನ್ನು ಏನೋ ಸಾಧನೆ ಮಾಡಿದಂತೆ ಶಾಸಕ ಬಿ.ಸಿ.ನಾಗೇಶ್ ಹಸಿ ಸುಳ್ಳು ಹೇಳಿಕೊಂಡು ಮತಯಾಚಿಸುತ್ತಿರುವುದನ್ನು ಮತದಾರರು ಖಂಡಿಸುವ ಮೂಲಕ ಹುಟ್ಟು ಹೋರಾಟಗಾರ, ರೈತಪರ ಚಿಂತಕ ಬಿ.ಎಸ್. ಯಡಿಯೂರಪ್ಪನವರ ಕೆಜೆಪಿ ಪಕ್ಷದ ಅಭ್ಯರ್ಥಿಯಾದ  ತೆಂಗಿನಕಾಯಿ ಗುರುತಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಬಿ.ಎಸ್.ವೈ ಅವರನ್ನು ಮುಖ್ಯಮಂತ್ರಿಯಾಗಿಸಲು ತಮ್ಮ ಮತ ದಾನ ಮಾಡಬೇಕೆಂದು ಲೋಕೇಶ್ವರ ಮತದಾರರಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement