ನಾಡಗೌಡರಿಂದಪ್ರಚಾರ
ಪಾವಗಡ: ಪಟ್ಟಣಕ್ಕೆ ಜೆಡಿಯು ರಾಜ್ಯಾಧ್ಯಕ್ಷ ನಾಡಗೌಡ ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ನಂತರ ಪಟ್ಟಣದ ಆಂಧ್ರ ಭವನಕ್ಕೆ ತೆರಳಿ ಪಾವಗಡದಲ್ಲಿ ಜೆಡಿಯು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು. ಬಡವರ ಏಳಿಗೆ ಹಾಗೂ ಪಾರದರ್ಶಕ ಆಡಳಿತಕ್ಕೆ ರಾಜ್ಯದಲ್ಲಿ ಜೆಡಿಯು ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದ ಅವರು ಪಕ್ಷದ ಅಧಿಕೃತ ಅಭ್ಯರ್ಥಿ ಕೆ.ಗೋಪಾಲ ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಬಡವ ರೈತರ, ಮಹಿಳೆಯರು ಸೇರಿದಂತೆ ಜನಪರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜೆಡಿಯು ಬೆಂಬಲಿಸಿ ಎಂದು ಮನವಿ ಮಾಡಿದರು.
ರಾಜ್ಯ ಮುಖಂಡ ಜಿ.ಕೆ.ರವಿ, ಉಪಾಧ್ಯಕ್ಷ ನಾಗತಿಹಳ್ಳಿ ಪಂಚಾಕ್ಷರಯ್ಯ ನಟರಾಜ್ ಎಚ್.ಗೋಪಾಲ್ (ಎಲ್‌ಐಸಿ)ಮುಂತಾದವರು ಮಾತನಾಡಿದರು.