ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್ಪಿ ಕಾರ್ಯಕರ್ತನ ಅಪಹರಣ: ದೂರು

Vishwanath S
Updated On : 24 Apr 2013, 12:54 pm

ತುಮಕೂರು: ಉತ್ತರ ಪ್ರದೇಶ ಮೂಲದ ಬಿಎಸ್ಪಿ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ ಎಂದು ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಮಧುಗಿರಿ ಠಾಣೆಗೆ ದೂರು ನೀಡಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಮಾತನಾಡಿ ಬಿಎಸ್ಪಿ ಸಂಘಟನೆಗಾಗಿ ಉತ್ತರ ಪ್ರದೇಶದಿಂದ ಆಗಮಿಸಿದ್ದ ಜಮಾಲ್ ಅಹಮದ್, ಮಹಮದ್ ಬದುರುದ್ದೀನ್ ಅನ್ಸಾರಿ ಮತ್ತು ಗುಲಾಂ ಅಹಮದ್ ಮಧುಗಿರಿಗೆ ಬಂದು ಪ್ರಚಾರ ಮಾಡುತ್ತಿದ್ದರು.ಕಳೆದ ರಾತ್ರಿ ಬಟ್ಟೆ ತರಲು ಮಹಮದ್ ಬದುರುದ್ದೀನ್ ಅನ್ಸಾರಿ ಮನೆಗೆ ಹೋದರು. ರಾತ್ರಿ 12 ಗಂಟೆಯಾದರೂ ವಾಪಸ್ ಬಂದಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಮುನಿಯಪ್ಪ ತಿಳಿಸಿದ್ದಾರೆ. 22 ರಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಬದುರುದ್ದೀನ್‌ರನ್ನು ಬೆದರಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರೇ ಅಪಹರಿಸಿದ್ದಾರೆ ಎಂದು ಅವರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement