ಮುಖಂಡರ ಮನೆ ಮೇಲೆ ಅಧಿಕಾರಿ ದಾಳಿ
ಪಾವಗಡ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಹಾಗೂ ಹಣ ದಾಸ್ತಾನು ಮಾಡಿರುವ ಸಂಶಯದ ಮೇರೆಗೆ ಚುನಾವಣಾಧಿಕಾರಿಗಳು ಮಂಗಳವಾರ ಪಟ್ಟಣದ ವಿನಾಯಕ ನಗರದ ಪ್ರಮುಖ ಪಕ್ಷದ ಮುಖಂಡರೊಬ್ಬರ ಮನೆಯೊಂದರ ಮೇಲೆ ದಾಳಿ ನಡೆಸಿ ತನಿಖೆ ಮಾಡಿದ ಘಟನೆ ನಡೆಯಿತು.
ಚುನಾವಣಾಧಿಕಾರಿ ಮಹಮ್ಮದ್ ಆಲ್ತಪ್ ಪಾಷ, ತನಿಖಾಧಿಕಾರಿ ಲಕ್ಷ್ಮಯ್ಯ ಹಾಗೂ ಪಿಎಸ್ಐ ರಾಮಕೃಷ್ಣಪ್ಪ, ನಟರಾಜ್ ಎಂಬುವರು ವಿನಾಯಕ ನಗರದ ಮುಖಂಡರೊಬ್ಬರ ಮನೆಗೆ ಧಾವಿಸಿ ಮನೆಯ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದರು. ಯಾವುದೇ ರೀತಿಯ ಅಕ್ರಮ ದಾಸ್ತಾನು ಪತ್ತೆ ಆಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.