'ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ'
ಪಾವಗಡ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ ಗೆಲ್ಲಿಸಿ ಎಂದು ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಮನವಿ ಮಾಡಿದರು.
ಅವರು ಮಂಗಳವಾರ ಕಡಮಲಕುಂಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಶಾಶ್ವತ ಕುಡಿಯುವ ನೀರು ಅನುಷ್ಠಾನ ಸೇರಿದಂತೆ ನಿರ್ಗತಿಕರ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಪಕ್ಷದ ತಾಲೂಕು ಅಧ್ಯಕ್ಷ ಎನ್.ತಿಮ್ಮಾರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಜಿಪಂ ಸದಸ್ಯ ಎಂ.ಕೆ.ನಾರಾಯಣಪ್ಪ, ಗುತ್ತಿಗೆಗಾರ ಸುಬ್ಬರಾಯಪ್ಪ ಮುಂತಾದವರು ಮಾತನಾಡಿದರು. ದಂಡೋರ ಪ್ರಧಾನ ಕಾರ್ಯದರ್ಶಿ ಕಡಮಲಕುಂಟೆ ಹನುಮಂತರಾಯಪ್ಪ, ಗುತ್ತಿಗೆದಾರ ಸುಬ್ಬರಾಯಪ್ಪ ನೇತೃತ್ವದಲ್ಲಿ ರೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ರಾಮಾಂಜಿನೇಯ, ಮುಖಂಡರಾದ ಅಂಜಿನಪ್ಪ, ಅಕ್ಕಲಪ್ಪ, ಜಯರಾಮ್, ಕೆ.ಎಚ್.ಆರ್.ಆಂಜನೇಯ, ಹನುಮಂತರಾಯಪ್ಪ, ಪಿ.ವೆಂಕಟೇಶ್, ಪಿ.ನಾಗರಾಜ್, ಗ್ರಾಪಂ ಸದಸ್ಯರಾದ ಮಾರುತಿ ಈರಲಿಂಗೇಗೌಡ, ಸುಬ್ಬರಾಯಪ್ಪ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಜೆಡಿಎಸ್‌ಗೆ ಸೇರ್ಪಡೆಯಾದರು