ನೀರನ್ನು ಮಿತವಾಗಿ ಬಳಸಿ: ಯತಿರಾಜು
ಕ.ಪ್ರ.ವಾರ್ತೆ , ತುಮಕೂರು , ಏ.24
ನೀರನ್ನು ಮಿತವಾಗಿ ಬಳಸಿ ಎಂದು ಪರಿಸರವಾದಿ ಸಿ. ಯತಿರಾಜು ಅಭಿಪ್ರಾಯಪಟ್ಟರು.
ಅವರು ನಗರದಲ್ಲಿ ಅಂತಾರಾಷ್ಟ್ರೀಯ ಜಲ ಸಹಕಾರ ವರ್ಷದ ಆರಂಭವಾದ ಬೇಸಿಗೆ ವಿಜ್ಞಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಬೇಸಿಗೆ ಶಿಬಿರ ಚಟುವಟಿಕೆ ಆಧಾರಿತ. ನಾವು-ನೀವು ಚಟುವಟಿಕೆಗಳ ಮೂಲಕ ಅರ್ಥ ಮಾಡಿಕೊಳ್ಳೋಣ ಎಂದು ತಿಳಿಸಿದರು.
ಕೆರೆ- ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ, ಜಲ ಕ್ಷಾಮವಾಗುತ್ತಿದೆ ಎಂದರು. ವಿದ್ಯಾವಾಹಿನಿ ಕಾಲೇಜಿನ ಪ್ರಾಚಾರ್ಯ ಎಸ್. ಕುಮಾರಸ್ವಾಮಿಯವರು, ಹನಿ-ಹನಿ ನೀರನ್ನು ಉಳಿಸಿ, ಜೀವ ಸಂಕುಲ ಸಂರಕ್ಷಿಸಿ ಎಂಬ ನಾಮಫಲಕದ ಘೋಷವಾಕ್ಯಕ್ಕೆ ಸಹಿ ಹಾಕುವುದರ ಮೂಲಕ ಶಿಬಿರ ಉದ್ಘಾಟಿಸಿ ಈ ಘೋಷವಾಕ್ಯದಂತೆ ನಾವು ನಡೆದುಕೊಳ್ಳಬೇಕೆಂದರು. ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷೆ ಎನ್. ಅಕ್ಕಮ್ಮನವರು ವಿಜ್ಞಾನ ಗೀತೆಯನ್ನು ಹಾಡಿದರು.
ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ, ನಾವು-ನೀವು ಒಟ್ಟಿಗೆ ಸೇರಿ ಭೂಮಿಯ ಮೇಲೆ ಬದುಕುವುದನ್ನು ಕಲಿಯೋಣ ಎಂದರು. ಕರಾವಿಪ ಅಧ್ಯಕ್ಷ ಡಾ. ಹೆಚ್.ಎಸ್. ನಿರಂಜನಾರಾಧ್ಯರವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್, ನೀರು-ನಾಗರಿಕತೆಗಿರುವ ಸಂಬಂಧ ಕುರಿತು ಮಾತನಾಡಿ, ಎಲ್ಲರು ನೀರನ್ನು ಉಳಿಸಲು ಪ್ರಯತ್ನಿಸಬೇಕೆಂದರು. ಕೇಂದ್ರದ ಖಜಾಂಚಿ ಟಿ.ಜಿ. ಶಿವಲಿಂಗಯ್ಯ, ಸಹ ಕಾರ್ಯದರ್ಶಿ ಕೆ.ಎನ್. ಮಧುಸೂದನ ರಾವ್, ಉಪಾಧ್ಯಕ್ಷೆ ಎನ್. ಅಕ್ಕಮ್ಮ ಹಾಜರಿದ್ದರು.
ಶಿಬಿರದ ಸಂಚಾಲಕ ಕೆ. ನಾಗರಾಜರಾವ್ ಸ್ವಾಗತಿಸಿ, ನಿರೂಪಿಸಿದರು. ಪಿ. ಪ್ರಸಾದ್ ವಂದಿಸಿದವರು ಶಿಬಿರದ ಸಹ ಸಂಚಾಲಕ ಟಿ.ಎಸ್. ನಿತ್ಯಾನಂದ್ ಇದ್ದರು.