ಕಾಂಗ್ರೆಸ್ ಗೆಲವು ಖಚಿತ: ಕೆ.ಎಸ್.ಎಸ್
ತಿಪಟೂರು: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಿಬ್ಬನಹಳ್ಳಿ, ನೊಣವಿನಕರೆ, ಹೊನ್ನವಳ್ಳಿ, ಕಸಬಾ ಹೋಬಳಿ ಹಾಗೂ ನಗರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಪರ ಮತಯಾಚಿಸಿ ಮಾತನಾಡಿದ ಅವರು ಈ ಹಿಂದೆ ಕೆ. ಷಡಕ್ಷರಿಯವರು ಶಾಸಕರಾಗಿದ್ದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದ ಅಕ್ಷರ ದಾಸೋಹ, ಮಹಿಳಾ ಅಭ್ಯುದಯಕ್ಕಾಗಿ ಸ್ತ್ರೀಶಕ್ತಿ ಸಂಘಗಳು, ರೈತರ ಆರೋಗ್ಯ ಕಾಪಾಡಲು ಯಶಸ್ವಿನಿ, ಕೃಷಿಕರಿಗೆ ಸಹಾಯವಾಗಲು ರೈತ ಸಂಪರ್ಕ ಕೇಂದ್ರ, ನಿವೇಶನ ರಹಿತ ಬಡವರಿಗೆ ನಿವೇಶನಗಳ ಮಂಜೂರು ಮಾಡಿಸಿರುವುದೂ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿರುವುದರಿಂದ ಕೆ.ಷಡಕ್ಷರಿಯವರು ಗೆಲವು ಸಾಧಿಸಲಿದ್ದಾರೆಂದು ಸದಾಶಿವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.