ಕುಣಿಗಲ್‌ನಲ್ಲಿ ಬಿಜೆಪಿ ವಿಜಯದನಗು ಶತಸಿದ್ಧ
ಕ.ಪ್ರ.ವಾರ್ತ್ಣೆ ಕುಣಿಗಲ್ಣ್ ಏ. 25.
ಎಸ್‌ಪಿ ಮುದ್ದಹನುಮೇಗೌಡರಿಗೆ ಬಿ ಫಾರಂ ನೀಡಿ ನಂತರ ನಾಗರಾಜಯ್ಯನವರಿಗೆ ಸಿ ಫಾರಂ ನೀಡುವ ಮೂಲಕ ದ್ವಂದ್ವ ನೀತಿ ಅನುಸರಿಸಿದ ಜೆಡಿಎಸ್‌ಗೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಿ, ಬಿಜೆಪಿ ಬೆಂಬಲಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ವಿಜಯದನಗೆ ಬೀರಲಿದೆ ಎಂದು ಅಭ್ಯರ್ಥಿ ಡಿ.ಕೃಷ್ಣಕುಮಾರ್ ತಿಳಿಸಿದರು.
ಗುರುವಾರ, ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೋಡೋ ಶೋ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, ಎಸ್‌ಪಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿ ಎರಡು ದಿನಗಳೂ ಕಳೆಯದಿದ್ದಂತಹ ಸಂಧರ್ಭದಲ್ಲಿ ಮತ್ತೊಬ್ಬರಿಗೆ ಟಿಕೆಟ್ ನೀಡುವಂತ ಗೊಂದಲಕಾರಿ ನಿರ್ಣಯ ಕೈಗೊಂಡು, ತಾಲೂಕಿನ ಜನತೆಗೆ ಅಪಮಾನ ಮಾಡಿರುವ ಜೆಡಿಎಸಗೆ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ: ಎರಡು ಬಾರಿ ಸಚಿವರೂ, ಮೂರು ಬಾರಿ ಶಾಸಕರಾಗಿದ್ದ ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ, ಅಧಿಕಾರದಲ್ಲಿದ್ದಾಗ ಯಾವುದೇ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡದೆ, ಕೇವಲ ಅಧಿಕಾರಕ್ಕಾಗಿ ಹಾತೊರೆದು ಈಗ ಇದು ತಮ್ಮ ಕಡೆಯ ಚುನಾವಣೆ ತಮ್ಮನ್ನು ಆರಿಸಿ ಎಂದು ಮತಯಾಚನೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದ ಅವರು, ಎಸ್‌ಪಿಎಂ ಅವರಿಗೆ ಟಿಕೆಟ್ ನಿರಾಕರಿಸಿದ ಕ್ಷಣವೇ ಜೆಡಿಎಸ್
ಕಾರ್ಯಕರ್ತರು, ಬಿಜೆಪಿಯತ್ತಾ ಮುಖಮಾಡಿದ್ದಾರೆ ಎಂದರು.
ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಖಚಿತ ಎಂದರಲ್ಲದೆ, ಕಾಂಗ್ರೆಸ್ ಪಕ್ಷದ, ಶಾಸಕ ಬಿ.ಬಿ.ರಾಮಸ್ವಾಮಿಗೌಡ ನಿಷ್ಕ್ರಿಯತೆಯಿಂದಾಗಿ ಬರನಿರ್ವಹಣೆಗೆ ಬಂದಿದ್ದ 4.86ಕೋಟಿ ಅನುದಾನದಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ 2.86ಕೋಟಿ ರು. ಹಣ ವಾಪಸು ಹೋಗಿದ್ದು, ಇಂತಹ ವ್ಯಕ್ತಿಯ ಆಯ್ಕೆಯಿಂದ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಕಳೆಬಾರಿ ಗೆದ್ದು ಇಂದಿಗೂ ನೂರಾರು ಹಳ್ಳಿಗಳ ಕಡೆ ಮುಖ ಮಾಡದ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿ, ಬಿಜೆಪಿ ಬೆಂಬಲಿಸುವ ಮೂಲಕ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ಬಿಜೆಪಿ ಮುಖಂಡರಾದ ರಂಗಾಸ್ವಾಮಿ, ನಾರಾಯಣಗೌಡ, ನಟರಾಜು, ನಾಗರಾಜು, ರವಿ, ರಂಗಸ್ವಾಮಿ, ಸುರೇಶ್, ಕೃಷ್ಣ, ಹೊಸಹಳ್ಳಿಜಯರಾಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.