ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೇನೆ: ಜಯಚಂದ್ರ

Vishwanath S
Updated On : 26 Apr 2013, 12:06 pm

ಶಿರಾ: ಕಳೆದ 5 ವರ್ಷಗಳಿಂದ ಶಾಸಕನಾಗಿ ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಭೂಪಸಂದ್ರ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
1998 ರಲ್ಲಿ ಶಿರಾ ನಗರದಲ್ಲಿ ನೆಡೆದ ರೈತರ ಮೇಲಿನ ಗೋಲಿಬಾರ್ ನಂತರ ಶಿರಾ ತಾಲೂಕಿನಲ್ಲಿ ಅರಾಜಕತೆ ನಿರ್ಮಾಣವಾಗಿತ್ತು. ಇದರಿಂದಾಗಿ ಶಿರಾ ಎಂದರೆ ಭಯದ ವಾತಾವರಣ ಇತ್ತು. ನಾನು ಶಾಸಕನಾಗಿ ಆಯ್ಕೆಯಾದ ನಂತರ ಪ್ರತಿ ಹಳ್ಳಿಯಲ್ಲೂ ನೆಮ್ಮದಿ ವಾತಾವರಣ ಇರುವಂತೆ ನೋಡಿಕೊಂಡಿದ್ದೇನೆ. ಜೊತೆಗೆ ಹಲವಾರು ದೇವಾಲಯಗಳ ವಿವಾದ ಬಗೆಹರಿಸಿದ್ದೇನೆ ಎಂದರು.
ತಾ.ಪಂ. ಸದಸ್ಯ ಕಾಳೇಗೌಡ, ಜಿ.ಪಂ. ಮಾಜಿ ಸದಸ್ಯ ಪರ್ವತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ
ಉದಯಶಂಕರ್, ಮುದಿಮಡು ಮಂಜುನಾಥ್, ಶಶಿಧರ್, ರಾಕೇಶ್ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement