ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಗೃಹಕಚೇರಿ ಮೇಲೆ ಅಧಿಕಾರಿಗಳ ದಾಳಿ

Vishwanath S
Updated On : 26 Apr 2013, 12:04 pm

ಕುಣಿಗಲ್:  ಪ್ರಸಕ್ತ ಚುನಾವಣೆಯಲ್ಲಿ ಮತದಾರರಿಗೆ ಆಮಿಶ ಒಡ್ಡಲು ಅಕ್ರಮವಾಗಿ ಹಣ ಹಾಗೂ ಇತರೆ ಉಡುಗೊರೆಗಳನ್ನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಗೃಹಕಚೇರಿಯಲ್ಲಿ ಸಂಗ್ರಹಿಸಿದ್ದಾರೆಂದು ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ, ಅಧಿಕಾರಿಗಳ ತಂಡ ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ, ಬರಿಗೈಯಲ್ಲಿ ಹಿಂದಿರುಗಿದರು.
ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿ ರವಿಕಿರಣ್ ಅವರ ಕುವೆಂಪು ನಗರದ ಗೃಹಕಚೇರಿಯ ಮೇಲೆ, ಮಾದರಿ ನೀತಿ ಸಂಹಿತೆ ಪಾಲನಾಧಿಕಾರಿ ಬೆಟ್ಟಸ್ವಾಮಿಗೌಡ, ಚುನಾವಣಾಧಿಕಾರಿ ಅತುಲ್, ಉಪಚುನಾವಣಾಧಿಕಾರಿ ಜಗದೀಶ್, ಸೇರಿದಂತೆ ಅಧಿಕಾರಿಗಳ ತಂಡ ಪೊಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ರಾತ್ರಿ 9ಗಂಟೆ ಸಮಯದಲ್ಲಿ ದಿಢೀರ್ ದಾಳಿ ನಡೆಸಿ, ಪ್ರತಿಯೊಂದು ಕೊಣೆಗಳನ್ನು, ಮನೆಯ ಮುಂದಿದ್ದ ಹಲವು ವಾಹನಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.
ಮಧ್ಯರಾತ್ರಿವರೆಗೂ ಶೋಧ ಕಾರ್ಯ ಮುಂದುವರೆಸಿದ್ದು, ಕೊನೆಗೆ ಆಕ್ಷೇಪಾರ್ಹ ಯಾವುದೇ ವಸ್ತುಗಳು ಸಿಗದೆ, ಅಧಿಕಾರಿಗಳು ಬರಿಗೈಯಲ್ಲಿ ಹಿಂದಿರುಗಿದರು. ಘಟನೆ ಬಗ್ಗೆ ರವಿಕಿರಣ್ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಲ್ಪ ಕಾಲದಲ್ಲೆ ತಾಲೂಕಿನ ವಿವಿಧೆಡೆಯಲ್ಲಿ ರವಿಕಿರಣ್ ಅಪಾರ ಬೆಂಬಲಿಗರನ್ನು ಹೊಂದಿದ್ದು,ಅವರ ಏಳಿಗೆ ಸಹಿಸದೆ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪಗಳು ಮಾಡಿ ದಾಳಿ ನಡೆಸಿವೆ. ಆದರೆ, ಇದಕ್ಕೆಲ್ಲಾ ಚುನಾವಣೆಯಲ್ಲಿ ತಕ್ಕ ಉತ್ತರ ದೊರಕಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement