ಬಿಎಸ್‌ಪಿ ಬೆಂಬಲಿಸಿ: ರಾಮಸುಬ್ಬಯ್ಯ
ಪಾವಗಡ: ಕೃಷಿ, ಕೂಲಿ ಕಾರ್ಮಿಕ ಸೇರಿದಂತೆ ಎಲ್ಲಾ ವರ್ಗದ ಪ್ರಗತಿಗೆ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಿಎಸ್‌ಪ್ನಿ ಬೆಂಬಲಿಸಿ ಎಂದು ಪಕ್ಷದ ತಾ. ಅಧ್ಯಕ್ಷ ಬಿ.ಟಿ.ರಾಮಸುಬ್ಬಯ್ಯ ಮನವಿ ಮಾಡಿದರು.
ಅವರು ಪಟ್ಟಣದಲ್ಲಿ ಏರ್ಪಾಡಿಸಿದ್ದ ಮಹಿಳಾ ಸ್ವಸಾಹಾಯ ಸಂಘಗಳ ಸಭೆಯಲ್ಲಿ ಮಹಿಳಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಎಸ್‌ಪಿಯಿಂದ ಮಹಿಳೆಯೊಬ್ಬರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ದೀನ ದಲಿತ ಶೋಷಿತರು ಸೇರಿದಂತೆ ಎಲ್ಲಾ ವರ್ಗದ ಸಾಮಾಜಿಕ ನ್ಯಾಯಕ್ಕೆ ಪಕ್ಷದ ಮಹಿಳಾ ಅಭ್ಯರ್ಥಿ ನಾಗರತ್ನಮ್ಮ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಕೇಳಿಕೊಂಡರು.
ಪಕ್ಷದ ಕಾರ್ಯದರ್ಶಿ ಉದ್ಘಘಟ್ಟೆ ಎಸ್.ಹನುಮಂತರಾಯಪ್ಪ, ಮುಖಂಡ ರಾಮ್ ರಾಜ್, ಅಭ್ಯರ್ಥಿ ನಾಗರತ್ನಮ್ಮ, ಭೂಪೂರ್ ಜಯಮ್ಮ, ಭೂಲಕ್ಷ್ಮಮ್ಮ, ಮಂಜುಳಮ್ಮ, ಅಮೋಜಮ್ಮ ಮುಂತಾದವರಿದ್ದರು.