ರಾಜ್ಯದ ಅಭಿವೃದ್ಧಿ ಮಹಾಪುರುಷ ಬಿಎಸ್ವೈ
ತುಮಕೂರು: ಕರ್ನಾಟಕದ ಅಭಿವೃದ್ಧಿ ಮಹಾಪುರುಷ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಎಚ್.ನಿಂಗಪ್ಪ ಗುಣಗಾನ ಮಾಡಿದರು. ಅವರು ಬೆಳ್ಳಾವಿ ಹೋಬಳಿಯಲ್ಲಿ ಏರ್ಪಾಟಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ತುಮಕೂರು ಗ್ರಾಮಾಂತರದ ಸುಮಾರು 900 ಕೋಟಿ ರು.ಗಳ ಅಭಿವೃದ್ಧಿ ಕೆಲಸಗಳಿಗೆ ಕಾರಣ ಬಿ.ಎಸ್. ಯಡಿಯೂರಪ್ಪ. ಅವರ ಅವಧಿಯಲ್ಲೇ ಬೆಳ್ಳಾವಿಯ 6 ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಆದೇಶವಾಗಿದ್ದು. ಕಾವೇರಿ ಸಮಸ್ಯೆ ನೀಗಿಸಲು ಪ್ರಾದೇಶಿಕ ಪಕ್ಷ ಬೇಕು. ಆ ಶಕ್ತಿ ಇರುವುದು ಯಡಿಯೂರಪ್ಪನವರ ಕೆಜೆಪಿ ಮಾತ್ರ. ನಿಯತ್ತಿಲ್ಲದ ಸುರೇಶ್ಗೌಡ ಹಾಗೂ ಹಣ-ಹೆಂಡ ಹಂಚಿ ಗೆಲುವಿನ ಕನಸು ಕಾಣುತ್ತಿರುವ ಜೆಡಿಎಸ್ನ ಗೌರಿಶಂಕರ್ ಅವರನ್ನು ಸೋಲಿಸುವಂತೆ ಮನವಿ ಮಾಡಿದರು. ಯಡಿಯೂರಪ್ಪನವರಿಲ್ಲದ ಬಿಜೆಪಿ ಶೂನ್ಯ ಎಂದು ಲೇವಡಿ ಮಾಡಿದ ನಿಂಗಪ್ಪ, ಯಡಿಯೂರಪ್ಪನವರ ಶಕ್ತಿ ಮೇ 8 ರಂದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.