ಶಾಸಕ ಸಮ್ಮುಖ ಡಾ. ಓಂಕಾರ ನಾಯಕ್ ಕಾಂಗ್ರೆಸ್ಗೆ ಸೇರ್ಪಡೆ
ಪಾವಗಡ: ಹಿರಿಯ ಮುಖಂಡ ಕೆ.ಎನ್. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಬೆಂಬಲಿಸುವಂತೆ ಬಿಎಸ್ಆರ್ ಕಾಂಗ್ರೆಸ್ನ ತಾಲೂಕು ಅಧ್ಯಕ್ಷರಾಗಿದ್ದ ಡಾ. ಓಂಕಾರ ನಾಯಕ್ ಕಾರ್ಯಕರ್ತರಿಗೆ ಮನವಿ ಮಾಡಿದರು.
ಅವರು ಶನಿವಾರ ಪಟ್ಟಣದ ಆಂಧ್ರಗಿರಿ ಸಭಾ ಭವನದಲ್ಲಿ ಶಾಸಕ ವೆಂಕಟರಮಣಪ್ಪ, ಪಕ್ಷದ ಅಧ್ಯಕ್ಷ ಸುದೇಶ್ಬಾಬು, ಮುಖಂಡರಾದ ಜಂಪಯ್ಯ, ನರಸಿಂಹಯ್ಯ ಸಮ್ಮುಖದಲ್ಲಿ ಅನೇಕ ಮಂದಿ ಬೆಂಬಲಿಗರೊಂದಿಗೆ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಮಾತನಾಡುತ್ತಿದ್ದರು. ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ಅವರ ಉತ್ತಮ ಒಡನಾಟ,ಅವರ ಸರಳತೆ ಹಿನ್ನೆಲೆಯಲ್ಲಿ ನಾನು ಸೇರಿದಂತೆ ನಮ್ಮೊಂದಿಗಿರುವ ಅನೇಕರು ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದಾಗಿ ಅವರು ತಿಳಿಸಿದರು.