ಕಾಂಗ್ರೆಸ್ಗೆ ಮತ ನೀಡಲು ಮನವಿ
ತುಮಕೂರು: ಸಭ್ಯ, ಸ್ಥಿರ, ಭ್ರಷ್ಟಾಚಾರ ಮುಕ್ತ, ಜಾತ್ಯತೀತ ಸರ್ಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಸ್ಥಳೀಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ. ಶ್ರೀ ಸಾಮಾನ್ಯರ ಮತದಾನ ವೇದಿಕೆ, ಕರ್ನಾಟಕ ಸಂಘಟನೆಯ ಸಂಚಾಲಕ ಡಾ. ರವಿವರ್ಮ ಕುಮಾರ್ ಮತ್ತು ಹಿರಿಯ ಸಮಾಜವಾದಿ ಹೋರಾಟಗಾರ ಪ. ಮಲ್ಲೇಶ್ ಹಾಗೂ ಜಿಲ್ಲೆಯ ಸ್ಥಳೀಯ ಪ್ರಗತಿಪರ ಸಂಘಟನೆಗಳು ಸಭೆ ಸೇರಿ ಚರ್ಚಿಸಿ ಮೇಲಿನಂತೆ ತೀರ್ಮಾನಿಸಿತು. ಛಿದ್ರವಾಗಿರುವ ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಗಳು ಹಾಗೂ ತನ್ನ ಅವಕಾಶವಾದಿ ರಾಜಕಾರಣಕ್ಕೆ ಕುಖ್ಯಾತವಾಗಿರುವ ಜೆಡಿಎಸ್ ಎಂಬ ಪಾಳೆಗಾರಿ, ಕುಟುಂಬ ಕೇಂದ್ರಿತ ಪಕ್ಷಗಳು ಚುನಾವಣೆ ನಂತರ ಅಪವಿತ್ರ ಮೈತ್ರಿಯಲ್ಲಿ ಒಟ್ಟುಗೂಡಿ ಸರ್ಕಾರಿ ರಚಿಸಿ ಮತ್ತೊಮ್ಮೆ ರಾಜ್ಯವನ್ನು ಬೆಚ್ಚಿ ಬೀಳಿಸಿದರೆ ಆಶ್ಚರ್ಯವಿಲ್ಲ ಎಂದು ತಿಳಿಸಿದರು. ನಮ್ಮ ಆಪತ್ಕಾಲದ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷ ಕೇಂದ್ರದದಲ್ಲಿ ಕೆಲ ಆತಂಕಕಾರಿ ರಾಜಕೀಯ ನಿರ್ಧಾರಗಳ ಹೊರತಾಗಿಯೂ ತನ್ನ ಸಂವಿಧಾನಿಕ ಚೌಕಟ್ಟಿನೊಳಗೆ ನೀತಿ ನಡಾವಳಿಗಳ ಮೂಲಕ ಸಭ್ಯ ರಾಜಕೀಯ ಪಕ್ಷವೆಂಬ ಕಾರಣದಿಂದ ನಮಗಿರುವ ಏಕೈಕ ಆಯ್ಕೆಯಾಗಿದೆ ಎಂದಿದ್ದಾರೆ.