ಕ್ಷೌರದ ಪೆಟ್ಟಿಗೆ, ಐರನ್ ಬಾಕ್ಸ್...
ತುರುವೇಕೆರೆ : ಚುನಾವಣೆಗೆ ಸ್ಪರ್ಧೆ ಮಾಡುವ ಪಕ್ಷಗಳು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯಾವ ಯಾವ ಯೋಜನೆಗಳನ್ನು ಜಾರಿಗೆ ತರಲಿವೆ ಎಂಬುದನ್ನು ಘೋಷಣೆ ಮಾಡುವುದು ಸಾಮಾನ್ಯ. ಅದರಂತೆಯೇ ಇಲ್ಲಿಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಕುಮಾರ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿರುವ ಹೈಲೈಟ್ಸ್ ಇದು. 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಮಾಸಾಶನ ದೊರಕಿಸಲಾಗುವುದು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ, ತಾಲೂಕಿನ ಎಲ್ಲಾ ಕಾಲೇಜುಗಳ ಪೈಕಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡುವುದು, ಅಂಗವಿಕಲರಿಗೆ ತಮ್ಮ ಸ್ವಂತ ಖರ್ಚಿನಿಂದ ವಾರ್ಷಿಕ 500 ರು. ಗೌರವ ಧನ ನೀಡುವುದು, ಕ್ಷೌರಿಕ ವೃತ್ತಿ ಮಾಡುತ್ತಿರುವವರಿಗೆ ವಾರ್ಷಿಕ ಒಂದೊಂದು ಕ್ಷೌರಿಕ ಪೆಟ್ಟಿಗೆಯನ್ನು ಉಚಿತವಾಗಿ ತಮ್ಮ ಖರ್ಚಿನಲ್ಲಿ ನೀಡುವುದು, ಮಡಿವಾಳ ಜನಾಂಗದವರಿಗೆ ವರ್ಷಕ್ಕೊಂದು ಐರನ್ ಪೆಟ್ಟಿಗೆಯನ್ನು ಉಚಿತವಾಗಿ ಸ್ವಂತ ಖರ್ಚಿನಿಂದ ನೀಡುವುದು, ಸಕ್ಕರೆ ಕಾಯಿಲೆಯಿಂದ ಬಳುತ್ತಿರುವವರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುವ ಭರವಸೆ ಹಾಗೂ ಕ್ಷೇತ್ರದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ತೆರೆಯುವ ಭರವಸೆಯನ್ನು ಶಿವಕುಮಾರ್ ನೀಡಿದ್ದಾರೆ. ತಾವು ಮಂಡಿಸಿರುವ ಪ್ರಣಾಳಿಕೆ ಸಾಕಾರಗೊಳಿಸುವ ಶಕ್ತಿ ತಮಗೆ ಇದೆ ಎಂದು ಶಿವಕುಮಾರ್ ಹೇಳುತ್ತಾರೆ. ಇವರೊಂದಿಗೆ ಬೀಚನಹಳ್ಳಿ ಹರೀಶ್, ಮಾಚೇನಹಳ್ಳಿ ಚಿದಾನಂದಸ್ವಾಮಿ, ಕಲ್ಲಬೋರನಹಳ್ಳಿ ರಮೇಶ್, ಲಕ್ಷ್ಮಣಗೌಡ ಹಾಗೂ ದಾಸೇಗೌಡ ಮೊದಲಾದವರು ಮತಯಾಚನೆಯನ್ನು ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಜಯಣ್ಣ
ತಿಪಟೂರು: ವಕೀಲರ ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಜಯಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಚನ್ನಕೇಶವ, ಕಾರ್ಯದರ್ಶಿಯಾಗಿ ಟಿ.ಬಸವರಾಜು, ಜಂಟಿ ಕಾರ್ಯದರ್ಶಿಯಾಗಿ ಜಿ.ವಿಶ್ವನಾಥ್, ಖಜಾಂಚಿ ಸಿ.ಎಸ್. ನಾಗೇಂದ್ರ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಕೆ.ಬಿ.ಬನಶಂಕರ, ಕೆ.ಬಿ.ಬಾಲಕೃಷ್ಣ, ಕೆ.ಆರ್. ದಯಾನಂದ್, ಎಂ.ಕೆ.ದಕ್ಷಿಣಮೂರ್ತಿ, ಎಚ್.ಎಸ್.ಕೃಷ್ಣೇಗೌಡ, ಎಲ್.ನಂದೀಶ್ಕುಮಾರ್, ಎಂ.ಕೆ.ಯೋಗನಾಂದ ಇವರುಗಳನ್ನು ಚುನಾವಣಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.
ಬಾಲೇನಹಳ್ಳಿ ಶಿವಣ್ಣ ಕಾಂಗ್ರೆಸ್ಗೆ ಸೇರ್ಪಡೆ
ತುಮಕೂರು: ಬಾಲೇನಹಳ್ಳಿ ಶಿವಣ್ಣ ಅವರು ಜೆಡಿಎಸ್ ತೊರೆದು ರಾಹುಲ್ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಜಕಣಾಚಾರಿ ತಿಳಿಸಿದ್ದಾರೆ.
ಅಲೆಮಾರಿ ಘಟಕದ ಸಭೆ
ತುಮಕೂರು: ಇಲ್ಲಿನ ಕರ್ನಾಟಕ ಪ್ರಜಾ ಸೇನೆ ಕಚೇರಿಯಲ್ಲಿ ಅಲೆಮಾರಿ ಘಟಕದ ಮತದಾರರ ಮತದಾನ ಜಾಗೃತಿ ಸಭೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಹಂಚಿಹಳ್ಳಿ ರಾಮಸ್ವಾಮಿ ವಹಿಸಿದ್ದರು. ಸಭೆಯಲ್ಲಿ ಅಲೆಮಾರಿ ಜನಾಂಗದ ಮತದಾರರಿಗೆ ಮತದಾನ ಯಾರಿಗೆ ನೀಡಬೇಕು. ಹಾಗೂ ಆ ಜನಾಂಗಕ್ಕೆ ಏನು ಉಪಯೋಗವಾಗಿದೆ ಎಂಬ ಮತದಾನದ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಜಾಸೇನೆಯ ಅಲೆಮಾರಿ ಘಟಕದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಕರ್ನಾಟಕ ಪ್ರಜಾಸೇನೆಯ ಅಧ್ಯಕ್ಷ ಹಾಗೂ ಅಲೆಮಾರಿ ಜನಾಂಗದ ಮುಖಂಡ ಹಂಚಿಹಳ್ಳಿ ರಾಮಸ್ವಾಮಿ ಅಲೆಮಾರಿ ಜನಾಂಗದವರು ಯಾರೆಂದು ಸರ್ಕಾರ ವಿಂಗಡಣೆ ಮಾಡಿಲ್ಲ. ಉಳ್ಳವರು ಹಾಗೂ ಉಳ್ಳದೇ ಇರುವವರನ್ನು ಒಂದೇ ವರ್ಗಕ್ಕೆ ಸೇರಿಸಲಾಗಿದೆ ಎಂದು ಆರೋಪಿಸಿದರು. ಸಭೆಯಲ್ಲಿ ಕರ್ನಾಟಕ ಪ್ರಜಾ ಸೇನೆಯ ರಾಜ್ಯ ಗೌರವಾಧ್ಯಕ್ಷ ರಾಘವೇಂದ್ರ ಸ್ವಾಮಿ, ಕಾರ್ಯದರ್ಶಿ ರಾಜಶೇಖರ್, ಅಲೆಮಾರಿ ಘಟಕದ ತುಮಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ, ತಿಮ್ಮರಾಜನಹಳ್ಳಿ, ಮಂಡ್ಯ ಜಿಲ್ಲಾ ಅಲೆಮಾರಿ ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಶಿವಕುಮಾರ್, ನಾಗೇಂದ್ರಕುಮಾರ್, ರಾಮಣ್ಣ, ಹಂಚಿಹಳ್ಳಿ ನಾಗರಾಜು, ಗಂಗಣ್ಣ, ಬಾಬು ಮಧುಗಿರಿ, ಮಾರುತಿ, ಪುಟ್ಟಸ್ವಾಮಿ, ರಾಮಕೃಷ್ಣಪ್ಪ, ಗೋವಿಂದಪ್ಪ, ತುರುವೇಕೆರೆ, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ರಾಜಣ್ಮ, ಮದ್ದೂರಯ್ಯ, ಪುನಿತ್ಕುಮಾರ್, ಭೂಪಸಂದ್ರ ಭಾಗವಹಿಸಿದ್ದರು.
ತುಮಕೂರು: ಕೆಜೆಪಿ ಪದಾಧಿಕಾರಿಗಳು
ತುಮಕೂರು: ಕೆಜೆಪಿಯ ತುಮಕೂರು ನಗರ ಹಿಂದುಳಿದ ಘಟಕದ ಉಪಾಧ್ಯಕ್ಷರಾಗಿ ನರಸಿಂಹಯ್ಯ, ಜಿಲ್ಲಾ ಎಸ್ಸಿ ಘಟಕದ ಉಪಾಧ್ಯಕ್ಷರಾಗಿ ಬಿ.ಜಿ. ಸಣ್ಣರಂಗಯ್ಯ, ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಪರಮೇಶ್, ಜಿಲ್ಲಾ ಯುವ ಘಟಕದ ಕಾರ್ಯದರ್ಶಿಯಾಗಿ ಗಂಗರಾಜು ಕೆ.ಎನ್. ನೇಮಕಗೊಂಡಿದ್ದಾರೆ.