ಜೆಡಿಎಸ್ ಪರ ಕುಮಾರಸ್ವಾಮಿ ಇಂದು ಪ್ರಚಾರ
ಪಾವಗಡ: ಸೋಮವಾರ ಬೆಳಗ್ಗೆ 9ಗಂಟೆಗೆ ಶಾಸಕರ ಮೊದಲನೇ ಪುತ್ರ ಎಚ್.ವಿ.ಕುಮಾರಸ್ವಾಮಿ ತಾ. ಓಬಳಾಪುರಕ್ಕೆ ಆಗಮಿಸಿ ಜೆಡಿಎಸ್ ಪರ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಯುವ ಮುಖಂಡ ಓಬಳಾಪುರ ಗಿರೀಶ್ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಎಚ್.ವಿ.ಕುಮಾರಸ್ವಾಮಿ ಅವರು ತಮ್ಮ ಗ್ರಾಮಕ್ಕೆ ಆಗಮಿಸುತ್ತಿರುವುದು ನಮಗೆಲ್ಲಾ ಹರ್ಷ ತಂದಿದ್ದು, ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ನ ಆನೇಕ ಮಂದಿ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದರು.
ಇವರ ಜತೆ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಪಕ್ಷದ ತಾ.ಅಧ್ಯಕ್ಷ ತಿಮ್ಮಾರೆಡ್ಡಿ ಆರ್.ಸಿ.ಅಂಜಿನಪ್ಪ, ಕಾರ್ಯದರ್ಶಿ ಗೋವಿಂದಬಾಬು, ಕೆ.ವಿ.ಗಿರಿರಾಜ್ ಮುಂತಾದವರು ಆಗಮಿಸಲಿರುವುದಾಗಿ ಅವರು ತಿಳಿಸಿದ್ದಾರೆ.