ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ

Vishwanath S
Updated On : 29 Apr 2013, 12:30 pm

ಕ.ಪ್ರ.ವಾರ್ತೆ  ,   ಪಾವಗಡ  ,   ಏ.28
ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ, ನಟ ಚಿರಂಜೀವಿ ಮನವಿ ಮಾಡಿದರು.
ವಿಧಾನ ಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣಕ್ಕೆ ಆಗಮಿಸಿ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಎಚ್.ವಿ.ವೆಂಕಟೇಶ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ನನ್ನ ಅಚ್ಚುಮೆಚ್ಚಿನ ರಾಜ್ಯ ಕರ್ನಾಟಕ. ಅದರಲ್ಲೂ ಬೆಂಗಳೂರು ನಗರವೆಂದರೆ ನನಗೆ ಬಲು ಇಷ್ಟ. ಚುನಾವಣೆ ಸಂದರ್ಭದಲ್ಲಿ ನಟನಾಗಿ ಅಲ್ಲ, ಒಂದು ಪಕ್ಷದ ಜವಾಬ್ದಾರಿಯುತ ವ್ಯಕ್ತಿಯಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ಯುವಕ, ಸರಳ ವ್ಯಕ್ತಿತ್ವವುಳ್ಳ ಎಚ್.ವಿ. ವೆಂಕಟೇಶ್ ಅವರನ್ನು ಗೆಲ್ಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ: ಒಂದು ಕಾಲದಲ್ಲಿ ಕರ್ನಾಟಕ ಎಲ್ಲ ರಂಗದಲ್ಲಿಯೂ ಸಂಪತ್ ಭರಿತ ನಾಡಾಗಿತ್ತು. ಆದರೆ ಕಳೆದ 10ವರ್ಷಗಳಿಂದ ರಾಜ್ಯ ತೀವ್ರ ಸಂಕಷ್ಟದಲ್ಲಿದ್ದು ಕುಡಿಯುವ ನೀರು, ಬರ, ವಿದ್ಯುತ್, ನಿರುದೋಗ ಸಮಸ್ಯೆ ರಾಜ್ಯದಲ್ಲಿ ತಾಂಡವಾಡುತ್ತಿದೆ. ಅಲ್ಲದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಬಿಜೆಪಿ ಸರ್ಕಾರದ ಅನೇಕ ಮಂತ್ರಿಗಳು ಜೈಲು ಪಾಲಾಗಿದ್ದಾರೆ. ಇಂತಹ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.
ಜನಪರ ಯೋಜನೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಆಗುವ ಕನಸು ನನಸಾಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.  ಎಚ್.ವಿ.ವೆಂಕಟೇಶ್ ಅವರನ್ನು ಗೆಲ್ಲಿಸಿದರೆ, ಮತ್ತೊಮೆ ಪಾವಗಡಕ್ಕೆ ಆಗಮಿಸಿ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಭಿಮಾನಿಗಳೊಂದಿಗೆ ಬೆರೆಯುವ ಭರವಸೆ ನೀಡಿದರು.
ಆಂಧ್ರ ಕೃಷಿ ಸಚಿವ ರಘುವೀರರೆಡ್ಡಿ ಮಾತನಾಡಿ, ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪೈಪ್‌ಲೈನ್ ಮೂಲಕ ಪಾವಗಡಕ್ಕೆ ನದಿ ಮೂಲದ ನೀರು ತರುವಲ್ಲಿ  ಎದುರಾಗುವ ತೊಡಕನ್ನು ನಿವಾರಿಸಿ ನೀರು ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.
ವೆಂಕಟೇಶ್ ಗೆಲ್ಲಿಸಿ: ಶಾಸಕ ವೆಂಕಟರಮಣಪ್ಪ ಮತನಾಡಿ ತಾಲೂಕು ಅಭಿವೃದ್ಧಿ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ತಮ್ಮ ಪುತ್ರ ವೆಂಕಟೇಶ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಗುಂಡುಮಲ ತಿಪ್ಪೇಸ್ವಾಮಿ, ಮುಖಂಡರಾದ ನರಸಿಂಹಯ್ಯ, ಜಂಪಯ್ಯ, ಮಾಜಿ ಶಾಸಕ ಸೋಮ್ಲಾನಾಯ್ಕ್, ಮಾನಂ ವೆಂಕಟಸ್ವಾಮಿ, ಪಕ್ಷದ ತಾಲೂಕು ಅಧ್ಯಕ್ಷ ಸುದೇಶ್ ಬಾಬು, ಅಭ್ಯರ್ಥಿ ಎಚ್.ವಿ.ವೆಂಕಟೇಶ್, ಕಾರ್ಯದರ್ಶಿ ಬೊಮ್ಮತನಹಳ್ಳಿ ತಿಪ್ಪೇಸ್ವಾಮಿ, ಸೊಗಡು ವೆಂಕಟೇಶ್, ರಾಜೇಶ್, ಎಲ್‌ಐಸಿ ಗೋವಿಂದರಾಜ್, ನಾಗರ್ಜುನರೆಡ್ಡಿ, ಮೈಲಾರರೆಡ್ಡಿ, ರಿಜ್ವಾನ್‌ಉಲ್ಲಾ ಮುಂತಾದವರಿದ್ದರು.
ಚಿರಂಜೀವಿ ಆಗಮನದ ಹಿನ್ನೆಲೆಯಲ್ಲಿ ತಾಲೂಕಿನ ಸುಮಾರು 25ಸಾವಿರಕ್ಕಿಂತ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement