ಇಂದು ದೇವೇಗೌಡರ ಪಾವಗಡ ಭೇಟಿ ರದ್ದು
ಪಾವಗಡ: ಏ.30ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪಾವಗಡ ಭೇಟಿ ರದ್ದಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೇ 1ರಂದು ಬೆಳಿಗ್ಗೆ 10ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎನ್. ತಿಮ್ಮಾರೆಡ್ಡಿ ತಿಳಿಸಿದ್ದಾರೆ.
ಅವರು ಸೋಮವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇವೇಗೌಡ ಅವರು ಪಾವಗಡಕ್ಕೆ ಭೇಟಿ ಬಗ್ಗೆ ಇದುವರೆವಿಗೂ ಯಾವುದೇ ಅಧಿಕೃತ ಮಾಹಿತಿ ಪಕ್ಷದ ಕಚೇರಿಗೆ ಬಂದಿಲ್ಲ. ಆದರೆ ಕುಮಾರಸ್ವಾಮಿ ಆಗಮಿಸುವ ಬಗ್ಗೆ ಸ್ವಷ್ಟಮಾಹಿತಿ ಬಂದಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಗುಜ್ಜನಡು ಡಾ.ಕಿರಣ್ ಉಪಸ್ಥಿತರಿದ್ದರು.