'ಕುಮಾರಸ್ವಾಮಿ ಕೈ ಬಲಪಡಿಸಿ'
ಪಾವಗಡ: ರೈತರು ಸೇರಿದಂತೆ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬೆಂಬಲಿಸಿ ಎಂದು ಶಾಸಕ ವೆಂಕಟರಮಣ ಪುತ್ರ, ಮುಖಂಡ ಎಚ್.ವಿ. ಕುಮಾರಸ್ವಾಮಿ ಮನವಿ ಮಾಡಿದರು.
ಅವರು ಸೋಮವಾರ ತಾ,ಓಬಳಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ರೈತರ ಬಡವ ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರುವಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಡಳಿತ ಜಾರಿಗೆ ತನ್ನಿ ಎಂದ ಅವರು ಪಕ್ಷದ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸಲು ಕಂಕಣ ಬದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಗ್ರಾಮದ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ ಹಾಗೂ ಸತ್ಯನಾರಾಯಣರೆಡ್ಡಿ ನೇತೃತ್ವದಲ್ಲಿ ನಾಗೇಂದ್ರಗೌಡ, ಶಿವಪದ್ಮ, ಆರ್‌ಎಂಪಿ ವೈದ್ಯ ಡಾ. ಮೂಡಲಗಿರಿಯಪ್ಪ, ಆರ್.ತಿಪ್ಪೇಸ್ವಾಮಿ ಎನ್.ವಿಶ್ವನಾಥ್, ದಲಿತ ಮುಖಂಡ ಮಲ್ಲೇಶ್, ಡಿ.ಎಸ್. ಓಬಯ್ಯ, ಮುಕುಂದಪ್ಪ, ಗೋವಿಂದರಾಜ್ ಗೋಪಾಲ್, ಶ್ರೀನಿವಾಸ್, ಕೆ.ಲೋಕೇಶ್, ವೆಂಕಟೇಶ್, ನರಸಿಂಹರೆಡ್ಡಿ, ರಾಮು, ಗೋವಿಂದರಾಜ್ ಸೇರಿದಂತೆ ಅನೇಕ ಮಂದಿ ಪ್ರಮುಖ ಕಾರ್ಯಕರ್ತರು ಬಿಜೆಪಿ, ಬಿಎಸ್‌ಆರ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.