ತುರುವೇಕೆರೆ: ವಿವಿಧ ಪಕ್ಷಗಳಿಗೆ ಪಕ್ಷಾಂತರ
ತುರುವೇಕೆರೆ: ವಿಧಾನಸಭಾ ಚುನಾವಣೆಯ ಕಾವು ಬಿಸಿಲಿನಂತೆ ಏರುತ್ತಲೇ ಇದೆ. ಅದೇ ರೀತಿಯಲ್ಲಿ ವಿವಿಧ ಪಕ್ಷಗಳಲ್ಲಿ ಮುಖಂಡರನ್ನು ತಮ್ಮ ಪಕ್ಷಗಳ ಕಡೆಗೆ ಒಲಿಸಿಕೊಳ್ಳುವ ಪ್ರಯತ್ನಗಳೂ ಸಹ ನಡೆಯುತ್ತಿವೆ. ತಮ್ಮ ಗ್ರಾಮದ ಮುಖಂಡರು ಪಕ್ಷವೊಂದಕ್ಕೆ ಸೇರ್ಪಡೆಯಾದರೆ ಅದೇ ಗ್ರಾಮದ ಇತರೆ ಮಂದಿ ಅವರ ವಿರುದ್ಧದ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಾಗಿ ಬಿಟ್ಟಿದೆ. ಜೆಡಿಎಸ್ನ ವಕ್ತಾರರಾಗಿದ್ದ ವಕೀಲ ಮುದ್ದೇಗೌಡರು ಕೆಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಅವರ ಗ್ರಾಮವಾದ ಗೊಟ್ಟೀಕೆರೆಯಲ್ಲಿ ಗ್ರಾಮದ ಬಹುತೇಕ ಮುಖಂಡರು ಬಿಜೆಪಿ, ಕೆಜೆಪಿ ತ್ಯಜಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಹಾಗೂ ತಾ.ಪಂ.ಸದಸ್ಯ ಕೋಳಾಲ ಗಂಗಾಧರ್ ಅವರ ಸಮ್ಮುಖ ಜೆಡಿಎಸ್ಗೆ ಸೇರ್ಪಡೆಯಾದರು. ಜಿ.ಆರ್.ಗಂಗಾಧರ್, ಗೋವಿಂದರಾಜು, ಹೊನ್ನೇಗೌಡ, ನಾಗೇಗೌಡ, ದೊಡ್ಡೀರಯ್ಯ, ಚಂದ್ರಶೇಖರ್, ಆಂಜನಪ್ಪ, ಪುಟ್ಟಣ್ಣ, ಮಾಯಣ್ಣಗೌಡ ಮೊದಲಾದವರು ಗ್ರಾಮದ ಮುಖಂಡ ಗೋಪಾಲ್ ಹಾಗೂ ಪ್ರಕಾಶ್ ಅವರ ನೇತೃತ್ವದಲ್ಲಿ ಜೆಡಿಎಸ್ಗೆ ಸೇರ್ಪಡೆಯಾದರು. ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದ ಹಲವಾರು ಮುಖಂಡರು ಬಿಜೆಪಿ ಅಭ್ಯರ್ಥಿ ಬಿ.ಕೆ.ಸೋಮಣ್ಣ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಸ್. ಬೋರೇಗೌಡರ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾದರು.