ಬಿರುಗಾಳಿ ಮಳೆಗೆ ಲಕ್ಷಾಂತರ ರು. ನಷ್ಟ
ಗುಬ್ಬಿ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ವಿವಿಧ ಕಡೆಗಳಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಸಾವಿರಾರು ಬಾಳೆಗಿಡಗಳು, ತೆಂಗಿನ ಗಿಡಗಳು, ವೀಳ್ಯದೆಲೆ ತೋಟಗಳು ಮತ್ತು ಮಾವಿನ ಮರಗಳು ಉರುಳಿ ಬಿದಿದ್ದು ಲಕ್ಷಾಂತರ ರು.ನಷ್ಟ ಸಂಭವಿಸಿದೆ.
ಅಮ್ಮನಘಟ್ಟ, ತಿಪ್ಪೋರು, ತಿಪ್ಪೋರುಪಾಳ್ಯ, ಹೊನ್ನಮಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ರೈತರ ಜೀವನಾಧಾರವಾಗಿದ್ದ ಬಾಳೆ ಗಿಡಗಳು ಬಿರುಗಾಳಿ ಸಹಿತ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು ಗಿಡಗಳು ಕೊಯ್ಲಿಗೆ ಮುನ್ನವೇ ಮಣ್ಣು ಪಾಲಾಗಿರುವುದು ರೈತರನ್ನು ಕಂಗಾಲಾಗಿಸಿದೆ.