200ಕ್ಕೂ ಹೆಚ್ಚು ಕಾರ್ಯಕರ್ತರು ಕೆಜೆಪಿಗೆ
ಕ.ಪ್ರ.ವಾರ್ತೆ ತಿಪಟೂರು ಏ. 30
ರೈತಪರ ಹೋರಾಟಗಾರ, ಬಡವರ ಆಶಾಕಿರಣ ಮತ್ತು ಜನೋಪಯೋಗಿ ಯೋಜನೆಗಳ ರೂವಾರಿ ಬಿ.ಎಸ್. ಯಡಿಯೂರಪ್ಪನವರನ್ನು ಮತ್ತೆ ರಾಜ್ಯಕ್ಕೆ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಹಾಗೂ ಸಮಾಜ ಸೇವಕ ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಅವರ ನಾಯಕತ್ವ ಗುಣಗಳನ್ನು ಮೆಚ್ಚಿ ನಗರದ ಗಾಂಧಿನಗರದ ಹಾಗೂ ತಾಲೂಕಿನ ಕಲ್ಲಹಳ್ಳಿ ಮತ್ತು ಧರ್ಮೇಗೌಡನಪಾಳ್ಯದ ನೂರಾರು ಯುವ ಮುಖಂಡರು ಕೆಜೆಪಿಗೆ ಸೇರ್ಪಡೆಯಾದರು.
ಗಾಂಧೀನಗರದ ಜೆಡಿಎಸ್ ಮಖಂಡರಾದ ನಹೀಮ್, ಕಲೀಂ, ಸಯ್ಯದ್ ಇಮ್ರಾನ್ ಮತ್ತಿತರರು ತಾ.ಅಧ್ಯಕ್ಷ ರಘುಪತಿ, ನಗರಾಧ್ಯಕ್ಷ ನಾಸೀರ್ ಖಾನ್ ಸಮ್ಮುಖದಲ್ಲಿ ಸೇರ್ಪಡೆಯಾದರು. ತಡಸೂರು ಗ್ರಾ.ಪಂ.ಗೆ ಸೇರಿರುವ ಕಲ್ಲಹಳ್ಳಿ ಗ್ರಾಮದ ಪ್ರಕಾಶ್, ದಯಾನಂದ್, ಕುಮಾರ್, ಚಂದ್ರಶೇಖರ್, ರಾಜಶೇಖರ್, ಜಗದೀಶ್, ಕುಮಾರಸ್ವಾಮಿ, ಪಟೇಲ್ ಸೋಮಶೇಖರ್, ಶಿವರಾಜು, ಜಗದೀಶ್, ಕೆ.ಜೆ.ಮೋಹನ್ ಕುಮಾರ್, ಸಿದ್ದಯ್ಯ, ಹೊನ್ನಪ್ಪ, ಪಟೇಲ್ ಜಯರಾಂ ಮತ್ತಿತರರು. ಧರ್ಮೇಗೌಡನ ಪಾಳ್ಯದ ಮಾಜಿ ಗ್ರಾ.ಪಂ.ಅಧ್ಯಕ್ಷ ಚಂದ್ರಯ್ಯ, ಶಿವಣ್ಣ, ಕೃಷ್ಣಮೂರ್ತಿ, ರಮೇಶ್, ಜಗದೀಶ್, ಸುರೇಶ್, ದೇವರಾಜು ಸೇರಿದಂತೆ ನೂರಾರು ಬೆಂಬಲಿಗರೊಂದಿಗೆ ಕೆಜೆಪಿಗೆ ಸೇರ್ಪಡೆಯಾದರು.