ಇಂದು ಕಾರ್ಮಿಕರ ದಿನಾಚರಣೆ
ಕನ್ನಡಪ್ರಭ ವಾರ್ತೆ ತುಮಕೂರು ಏ.30
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಮೇ 1 ರಂದು ನಗರದ ರವೀಂದ್ರ ಕಲಾನಿಕೇತನದಲ್ಲಿ ಬೆಳಗ್ಗೆ 11 ಗಂಟೆಗೆ ಮೇ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಎಸ್. ನಿರಂಜನಾರಾಧ್ಯ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕೆ.ದೊರೈರಾಜ, ಕೆ.ಎಲ್. ಮಧುಸೂದನ್, ನಾಗರಾಜು, ಬಿ. ಉಮೇಶ್, ಗುಲ್ಜಾರ್ಬಾನು, ರಾಮಚಂದ್ರಶರ್ಮ, ಎನ್.ಕೆ. ಸುಬ್ರಹ್ಮಣ್ಯ, ಸೈಯಜ್ ಮುಜೀಬ್ ಮುಂತಾದವರು ಭಾಗವಹಿಸುವರು. ಅಂದು ಬೆಳಗ್ಗೆ 11 ಗಂಟೆಗೆ ಟೌನ್ಹಾಲ್ ವೃತ್ತದಲ್ಲಿ ಕಾರ್ಮಿಕರು ಸಮಾವೇಶಗೊಂಡ ನಂತರ ಬಿ.ಎಚ್. ರಸ್ತೆ ಮೂಲಕ ರವೀಂದ್ರ ಕಲಾನಿಕೇತನಕ್ಕೆ ತೆರಳಿ ಸಭೆ ನಡೆಸುವರು ಎಂದು ತಾಲೂಕು ಅಧ್ಯಕ್ಷ ಪುಟ್ಟೇಗೌಡ, ಕಾರ್ಯದರ್ಶಿ ಷಣ್ಮುಖಪ್ಪ, ಉಪಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.