ಎಂಜಿನಿಯರಿಂಗ್ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ತುಮಕೂರು, ಏ.30
ಇಲ್ಲಿನ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ವತಿಯಿಂದ ಹೈ ವೋಲ್ಟೇಜ್ ಎಂಜಿನಿಯರಿಂಗ್ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಿಪಿಆರ್ಐ ಡೈರೆಕ್ಟರ್ ಜನರಲ್ ಮುರುಗೇಶನ್ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಕುರಿತು ಸವಿಸ್ತಾರವಾಗಿ ಹೇಳಿದರು. ವಿದ್ಯುತ್ ಸರಬರಾಜಿನಲ್ಲಿ ಆಗುವ ನಷ್ಟ ಹಾಗೂ ಅದರ ಪರಿಹಾರದ ಬಗ್ಗೆ ಸಂಶೋಧನೆಯ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಸ್ಐಟಿ ಪ್ರಾಂಶುಪಾಲ ಡಾ. ಕೆ.ಎ. ಕೃಷ್ಣಮೂರ್ತಿ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು. ಸಿದ್ದಾರ್ಥ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಝೆಡ್ ಕುರಿಯನ್ ಕಾರ್ಯಾಗಾರ ಕುರಿತು ಮಾತನಾಡಿದರು. ಡಾ. ಬಿ. ರಾಜೇಶ್ ಕಾಮತ್ ಸ್ವಾಗತಿಸಿದರು. ಪ್ರೊ. ರವಿಪ್ರಸಾದ್ ವಂದಿಸಿದರು. ಪ್ರೊ. ಶ್ರೀನಾಥ್ ಪರಿಚಯಿಸಿದರು. ಶಿಲ್ಪ ನಿರೂಪಿಸಿದರು.