'ಜನಪರ, ಅಭಿವೃದ್ಧಿ ಪರ ನೀತಿ ನನ್ನ ಸಿದ್ಧಾಂತ'
ತಿಪಟೂರು: ಜನಪರ, ಅಭಿವೃದ್ಧಿಪರ ನೀತಿ ಸಿದ್ಧಾಂತ ನನ್ನದಾಗಿದೆ ಎಂದು ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಷಡಕ್ಷರಿ ತಿಳಿಸಿದರು. ತಾಲೂಕಿನ ಗುಂಗರಮೆಳೆ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನರ ಸೇವಕನಾಗಿ ನಿಸ್ವಾರ್ಥ ಸೇವೆ ಮಾಡುವುದಾಗಿ ತಿಳಿಸಿದರು.