ಜೆಡಿಎಸ್ ಬೆಂಬಲಿಸಲು ಮನವಿ
ತುಮಕೂರು: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಸ್ವಾತಂತ್ರ್ಯ ಹೋರಾಟಗಾರ ಎಂ. ಚಂದ್ರಶೇಖರಯ್ಯ ಮನವಿ ಮಾಡಿದ್ದಾರೆ.
ಈ ರಾಜ್ಯದಲ್ಲಿ ಸ್ಥಿರ ಹಾಗೂ ಜನಪರ ಸರ್ಕಾರ ಬರಬೇಕಾದರೆ ಪ್ರತಿಯೊಬ್ಬರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೆಡಿಎಸ್ ಹೊರೆತುಪಡಿಸಿ ಬೇರೆ ಯಾವ ಪಕ್ಷದಿಂದಲೂ ಸ್ಥಿರ ಸರ್ಕಾರ ಸಾಧ್ಯವಿಲ್ಲ ಎಂದ ಅವರು ಸಂಪೂರ್ಣವಾಗಿ ರೈತರ ಪಕ್ಷ ಎಂಬ ಹೆಗ್ಗಳಿಕೆಯನ್ನು ಜೆಡಿಎಸ್ ಹೊಂದಿದೆ ಎಂದರು.
ರಾಜಕೀಯ ಪಕ್ಷಗಳು ಆಸೆ, ಆಮಿಷಗಳ ಮೂಲಕ ಮತದಾರರನ್ನು ತಪ್ಪು ದಾರಿಕೆ ಎಳೆಯುತ್ತಿದ್ದಾರೆ. ಇದು ತಪ್ಪಬೇಕು ಎಂದು ತಿಳಿಸಿದರು.