ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್ಆರ್ ಕಾಂಗ್ರೆಸ್ಗೆ ನೇಮಕ

Rashmi Kasaragodu
Updated On : 1 May 2013, 12:15 pm

ತುಮಕೂರು:ಬಿಎಸ್ಆರ್ ಜಿಲ್ಲಾ ವಕ್ತಾರ ಸ್ಥಾನಕ್ಕೆ ಶಿವು ಚಂಗಾವರ ರಾಜಿನಾಮೆ ನೀಡಿದ್ದಾರೆ. ಅವರು ಜಿಲ್ಲಾ ಸಂಚಾಲಕ ಜಿ. ರಾಮಾಂಜನೇಯ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಆಂಧ್ರ ಮೂಲದವರಿಗೆ ಟಿಕೆಟ್ ನೀಡಿರುವುದರಿಂದ ಬೇಸತ್ತು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ಕಾಂಗ್ರೆಸ್ಗೆ ನೇಮಕ
ತುಮಕೂರು: ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಎಸ್.ಆರ್. ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಮಹದೇವ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಆರ್. ಲೋಕೇಶ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದ್ದಾರೆ.
ಇಂದು ಮೇ ದಿನ
ತುಮಕೂರು: ಇಲ್ಲಿನ ಚಿಕ್ಕಪೇಟೆಯಲ್ಲಿರುವ  ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಮೇ 1 ರಂದು ಬೆಳಗ್ಗೆ 10.30 ಕ್ಕೆ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಮೇ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಎಐಟಿಯುಸಿ ಗೌರವಾಧ್ಯಕ್ಷ ಟಿ.ಆರ್. ರೇವಣ್ಣ ನೆರವೇರಿಸುವರು. ಅಧ್ಯಕ್ಷತೆಯನ್ನು ಎಐಟಿಯುಸಿ ಜಿಲ್ಲಾಧ್ಯಕ್ಷ ಎನ್. ಶಿವಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪತ್ರಕರ್ತ ಮರಿಯಪ್ಪ, ರಾಘವೇಂದ್ರ, ಲೋಕೇಶ್, ಡಿ.ಎನ್. ಲಕ್ಷ್ಮಣ, ಕಲಾವತಿ, ಥಾಮಸ್, ವಾಸುದೇವಕುಮಾರ್, ಯೋಗೀಶ್, ಜ್ಯೋತಿ, ಶಶಿಕಾಂತ್ ಉಪಸ್ಥಿತರಿರುವರು.
8 ರಂದು ಆಚರಣೆ
ತುಮಕೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ಕಾರ್ಮಿಕ ದಿನವನ್ನು ಮೇ 8 ರ ನಂತರ ಆಚರಿಸಲು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ತೀರ್ಮಾನಿಸಿದೆ. ನಗರದಲ್ಲಿ ನಡೆದ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನ ಅಧ್ಯಕ್ಷ ಬಿ.ಪಿ.ರಾಜು, ನಟರಾಜೇಗೌಡ, ಲಚ್ಚಣ ಮುಂತಾದವರು ಇದ್ದರು.
ಬಸವೇಶ್ವರ ಪ್ರಶಸ್ತಿ
ತುಮಕೂರು: ತುಮಕೂರಿನ ಕೀರ್ತನ ರಂಗ ಬಳಗದ ಸಂಸ್ಥಾಪಕ ನರಸಿಂಹದಾಸ್ ಅವರಿಗೆ ಜಗಜ್ಯೋತಿ ಬಸವೇಶ್ವರ ಸದ್ಭಾವನಾ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement