ಉಪಚುನಾವಣೆ: ಶೇ. 74.34 ಮತದಾನ
ತುಮಕೂರು : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿದ್ದ, ತೆರವಾಗಿದ್ದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಶೇ.74.34ರಷ್ಟು ಮತದಾನವಾಗಿದೆ. ತುಮಕೂರು ತಾಲೂಕಿನ ನಿಡುವಳಲು ಗ್ರಾಮಪಂಚಾಯತಿಯ ನಾರಾಯಣಕೆರೆ ಮತಕ್ಷೇತ್ರದಲ್ಲಿ ಒಟ್ಟು 893 ಮತದಾರರ ಪೈಕಿ 738 ಮಂದಿ ಮತದಾನ ಮಾಡಿದ್ದು, ಶೇ.82.64ರಷ್ಟು ಮತದಾನವಾಗಿದೆ. ಸೀತಕಲ್ಲು ಗ್ರಾ.ಪಂ. ಹಿರೇದೊಡ್ಡವಾಡಿ ಕ್ಷೇತ್ರದ ಒಟ್ಟು 725 ಮತದಾರರ ಪೈಕಿ 390 ಮತದಾರರು ಮತಚಲಾಯಿಸಿದ್ದು, ಶೇ.53.79 ಮತದಾನವಾಗಿದೆ. ಹರಳೂರು ಗ್ರಾ.ಪಂ. ಕೌತಮಾರನಹಳ್ಳಿಯ ಒಟ್ಟು 953 ಮತದಾರರ ಪೈಕಿ 810 ಮತದಾರರು ಮತಚಲಾಯಿಸಿದ್ದು, ಶೇ.84.99 ಮತದಾನವಾಗಿದೆ. ಗೂಳೂರು ಗ್ರಾ.ಪಂ. ಗೂಳೂರು ಒಟ್ಟು 1079 ಮತದಾರರ ಪೈಕಿ 466 ಪುರುಷರು, 454 ಮಹಿಳೆಯರು ಸೇರಿದಂತೆ 920 ಮತದಾರರು ಮತಚಲಾಯಿಸಿದ್ದು, ಶೇ.85.26 ಮತದಾನವಾಗಿದೆ. ಕುಣಿಗಲ್ ತಾಲ್ಲೂಕಿನ ತಾವರೆಕೆರೆ ಗ್ರಾ.ಪಂ. ಆರ್.ಬ್ಯಾಡರಹಳ್ಳಿ ಕ್ಷೇತ್ರದ ಒಟ್ಟು 1130 ಮತದಾರರ ಪೈಕಿ 869 ಮತದಾರರು ಮತಚಲಾಯಿಸಿದ್ದು, ಶೇ.76.90 ಮತದಾನವಾಗಿದೆ. ಬಾಗೇನಹಳ್ಳಿ ಗ್ರಾ.ಪಂ. ಶೆಟ್ಟಿಗೆರೆ ಕ್ಷೇತ್ರದ ಒಟ್ಟು 876 ಮತದಾರರ ಪೈಕಿ 691 ಮತದಾರರು ಮತಚಲಾಯಿಸಿದ್ದು, ಶೇ.78.88 ಮತದಾನವಾಗಿದೆ. ಜಿನ್ನಾಗರ ಗ್ರಾ.ಪಂ. ಬೆಳ್ಳಿಗೆರೆ ಕ್ಷೇತ್ರದ ಒಟ್ಟು 460 ಮತದಾರರ ಪೈಕಿ 422 ಮತದಾರರು ಮತಚಲಾಯಿಸಿದ್ದು, ಶೇ.91.74 ಮತದಾನವಾಗಿದೆ. ತಿಪಟೂರು ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾ.ಪಂ. ಗುಡಿಗೊಂಡನಹಳ್ಳಿ ಕ್ಷೇತ್ರದ ಒಟ್ಟು 675 ಮತದಾರರ ಪೈಕಿ 502 ಮತದಾರರು ಮತಚಲಾಯಿಸಿದ್ದು, ಶೇ.74.37 ಮತದಾನವಾಗಿದೆ. ಚಿ.ನಾ.ಹಳ್ಳಿ ತಾಲೂಕಿನ ದಸೂಡಿ ಗ್ರಾ.ಪಂ. ದಸೂಡಿ ಕ್ಷೇತ್ರದ ಒಟ್ಟು 1230 ಮತದಾರರ ಪೈಕಿ 660 ಮತದಾರರು ಮತಚಲಾಯಿಸಿದ್ದು, ಶೇ.53.66 ಮತದಾನವಾಗಿದೆ. ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾ.ಪಂ. ಕೆ.ಕೊಪ್ಪ ಕ್ಷೇತ್ರದ ಒಟ್ಟು 640 ಮತದಾರರ ಪೈಕಿ 217 ಪುರುಷರು, 238 ಮಹಿಳೆಯರು ಸೇರಿದಂತೆ 455 ಮತದಾರರು ಮತಚಲಾಯಿಸಿದ್ದು, ಶೇ.71.09 ಮತದಾನವಾಗಿದೆ. ಶಿರಾ ತಾಲ್ಲೂಕಿನ ದೊಡ್ಡಅಗ್ರಹಾರ ಗ್ರಾ.ಪಂ. ದೊಡ್ಡಅಗ್ರಹಾರ ಕ್ಷೇತ್ರದ ಒಟ್ಟು 1480 ಮತದಾರರ ಪೈಕಿ 1048 ಮತದಾರರು ಮತಚಲಾಯಿಸಿದ್ದು, ಶೇ.70.81 ಮತದಾನವಾಗಿದೆ. ಪಾವಗಡ ತಾಲೂಕಿನ ತಿರುಮಣಿ ಗ್ರಾ.ಪಂ. ತಿರುಮಣಿ ಕ್ಷೇತ್ರದ ಒಟ್ಟು 1156 ಮತದಾರರ ಪೈಕಿ 740 ಮತದಾರರು ಮತಚಲಾಯಿಸಿದ್ದು, ಶೇ.64.01 ಮತದಾನವಾಗಿದೆ. ಸಾಸಲುಕುಂಟೆ ಗ್ರಾ.ಪಂ. ಕೆಂಚಮ್ಮನಹಳ್ಳಿ ಕ್ಷೇತ್ರದ ಒಟ್ಟು 793 ಮತದಾರರ ಪೈಕಿ 658 ಮತದಾರರು ಮತಚಲಾಯಿಸಿದ್ದು, ಶೇ.82.98 ಮತದಾನವಾಗಿದೆ. ಸಿದ್ದಾಪುರ ಗ್ರಾ.ಪಂ. ಸಿದ್ದಾಪುರ ಕ್ಷೇತ್ರದ ಒಟ್ಟು 862 ಮತದಾರರ ಪೈಕಿ 741 ಮತದಾರರು ಮತಚಲಾಯಿಸಿದ್ದು, ಶೇ.85.96 ಮತದಾನವಾಗಿದೆ. ಚೆನ್ನಕೇಶವಪುರ ಗ್ರಾ.ಪಂ. ಚೆನ್ನಕೇಶವಪುರ ಕ್ಷೇತ್ರದ ಒಟ್ಟು 834 ಮತದಾರರ ಪೈಕಿ 605 ಮತದಾರರು ಮತಚಲಾಯಿಸಿದ್ದು, ಶೇ.72.54 ಮತದಾನವಾಗಿದೆ.