ಕಾನೂನು ಸಲಹೆ ನೆರವು ಪಡೆಯಿರಿ: ನ್ಯಾ.ರಾಜಣ್ಣ ಸಲಹೆ
ಟೇಕಲ್: ಗ್ರಾಮೀಣ ಭಾಗದ ಜನತೆ ದೈಹಿಕ ಅಥವಾ ಜೀತಕ್ಕೆ ಒಳಗಾದವರಿಗೆ ಕಾನೂನಿನಲ್ಲಿ ತೊಡಕಾದರೆ ಅವರಿಗೆ ಮಾಹಿತಿ ಹಾಗೂ ನೆರವು ಪಡೆಯಲು ಮಾಲೂರಿನಲ್ಲಿ ನ್ಯಾಯಾಲಯ ಆವರಣದಲ್ಲಿನ ತಾಲೂಕು ಸೇವಾ ಸಮಿತಿ ಪ್ರಾಧಿಕಾರ ಸಂಪರ್ಕಿಸಿದರೆ ಅಂತಹವರಿಗೆ ಉಚಿತ ಕಾನೂನು ಸಲಹೆ ನೆರವು ನೀಡಲಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ, ತಾಲೂಕು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರರ್ತಿಳಿಸಿದರು.
ಇಲ್ಲಿನ ಬನಹಳ್ಳಿ ಗ್ರಾ.ಪಂ. ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಶಿಬಿರದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಸಂಜೀವನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಡಿ. ವೈಶಾಲಿ, ವಕೀಲರ ಸಂಘದ ಅಧ್ಯಕ್ಷ ಆರ್.ಸಿ. ಅಪ್ಪಾಜಿಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ರಾಮಕೃಷ್ಣಪ್ಪ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ಆಸ್ತಿ ಹಕ್ಕುಗಳ ಬಗ್ಗೆ ಈ.ಕೆ. ಸೋಮಶೇಖರ್, ಕಾರ್ಮಿಕರ ಕಾಯ್ದೆ ಬಗ್ಗೆ ಡಿ.ಕೆ. ಸರಸ್ವತಮ್ಮ ಉಪನ್ಯಾಸ ನೀಡಿದರು.
ಮಾಜಿ ದರಕಾಸ್ತು ಸಮಿತಿಯ ಮುನಿಶಾಮಿಗೌಡ, ಎಪಿಎಂಸಿ ಸದಸ್ಯ ಚಾನ್ ಪಾಷ, ವಕೀಲರು ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ ಕಿರಣ್, ಸಂಘದ ಕಾರ್ಯದರ್ಶಿ ಎಚ್.ಎನ್. ನಾಗರಾಜ್, ಟೇಕಲ್ ಎಎಸ್ಐ ರಷೀದ್ ಖಾನ್, ವಕೀಲರಾದ ಲೋಕೇಶ್ ಇದ್ದರು.