ಪಂಪ್ಸ್ಟೌವ್ ಸಿಡಿದು ಯುವತಿ ಸಾವು
ಕುಣಿಗಲ್: ಪಂಪ್ಸ್ಟೌವ್ ಸಿಡಿದು ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ತಾಲೂಕಿನ ಸಿದ್ದೇಮಣ್ಣಿನಪಾಳ್ಯದಲ್ಲಿ ನಡೆದಿದೆ.
ಮೃತಳನ್ನು ಗಂಗರತ್ನಮ್ಮ (20) ಎಂದು ಗುರುತಿಸಲಾಗಿದ್ದು, ಭಾನುವಾರದಂದು ಆಕೆಯ ಮನೆಯಲ್ಲಿ ಸೀಮೆಎಣ್ಣೆ ಪಂಪ್ಸ್ಟೌವ್ನಲ್ಲಿ ಅಡುಗೆ ಮಾಡುವ ಸಮಯದಲ್ಲಿ, ಸ್ಟೌವ್ನಲ್ಲಿ ಕಸಕಟ್ಟಿದ್ದರಿಂದ ಅದನ್ನು ಸ್ವಚ್ಛಗೊಳಿಸಿ, ಬೆಂಕಿ ಕಿಡಿಹೊತ್ತಿಸಿದ ಪರಿಣಾಮ ಒಮ್ಮೆಲೆ ಸ್ಟೌವ್ ಸಿಡಿದು, ಸುಟ್ಟುಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಮೃತಳ ತಂದೆ ಶಿವರಾಜ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ