ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳೆಯ ಶವ ಪತ್ತೆ

Rashmi Kasaragodu
Updated On : 6 Aug 2013, 12:57 pm

ಪಾವಗಡ: ತಾಲೂಕಿನ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಣಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಮಹಿಳೆಯ ಶವ ಪತ್ತೆಯಾಗಿದೆ.ಸುಮಾರು 45 ವರ್ಷದ ಈ ಮಹಿಳೆಯನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದ್ದು, ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಡಾ.ಸೌಮ್ಯಲತಾ ಭೇಟಿ ನೀಡಿದ್ದರು.
ಇಸ್ಪೀಟ್: 9 ಬಂಧನ
ಪಾವಗಡ: ಇಸ್ಪೀಟ್ ಆಟಗಾರರ ಮೇಲೆ ದಾಳಿ ಮಾಡಿದ ಪಾವಗಡ ಪೊಲೀಸರು ಆಟದಲ್ಲಿ ನಿರತರಾಗಿದ್ದ 9 ಮಂದಿಯನ್ನು ಬಂಧಿಸಿ ಅವರಲ್ಲಿದ್ದ 520 ರು.ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾ.ಕಡಪಲಕೆರೆ ಗ್ರಾಮದ ಕೆರೆ ಅಂಗಳದ ಹಳ್ಳಮೊಂದರಲ್ಲಿ ನಿರಂತರ ಇಸ್ಪೀಟ್ ದಂದೆ ನಡೆಯುತ್ತಿರುವ ಮಾಹಿತಿ ಮೇರೆಗೆ ಪಿಎಸ್ಐ ನಟರಾಜ್ ಹಾಗೂ  ಪೊಲೀಸರು ಸೋಮವಾರ ದಾಳಿ ನಡೆಸಿ ಆಟದಲ್ಲಿ ನಿರತರಾದ ಕಡಪಲಕೆರೆ ತಿಮ್ಮಣ್ಣ, ನಟರಾಜ್ ಸೇರಿದಂತೆ 9 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement