ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಪಂ ನಿರ್ಲಕ್ಷ್ಯ ಖಂಡಿಸಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

Rashmi Kasaragodu
Updated On : 8 Aug 2013, 12:27 pm

ಕನ್ನಡಪ್ರಭ ವಾರ್ತೆ   ಕೊರಟಗೆರ   ಆ.7
ಗ್ರಾಮದಲ್ಲಿ ಅನಧಿಕೃತವಾಗಿ ಕೋಳಿ ಫಾರಂ ನಿರ್ಮಿಸಿರುವುದರಿಂದ ರೋಗಗಳು ಹರಡುತ್ತಿದ್ದರೂ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಖಂಡಿಸಿ ಹರಿಹರಪ್ಪನ  ಪಾಳ್ಯದ ಗ್ರಾಮಸ್ಥರು ಹುಲಿಕುಂಟೆ  ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ  ನಡೆಸಿದರು.
ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಹರಪ್ಪನ ಪಾಳ್ಯದಲ್ಲಿ ಕಳೆದ 4 ವರ್ಷದಿಂದ ಸದರಿ ಗ್ರಾಮದ ಮಂಜುನಾಥ ಎಂಬುವರು ಅನಧಿಕೃತ ಕೋಳಿ ಫಾರಂ ನಿರ್ಮಿಸಿಕೊಂಡು ಪರಿಸರ ಹಾಳು ಮಾಡುವುದರೊಂದಿಗೆ ಗ್ರಾಮಕ್ಕೆ ಕುಡಿಯಲು ಸರಬರಾಜು ಮಾಡುವ ರೈಸಿಂಗ್ಲೈನ್ ಪೈಪ್ಗೆ ಮೋಟಾರ್ ಅಳವಡಿಸಿ ನೀರನ್ನು ಕೋಳಿ ಫಾರಂಗೆ ಬಳಸಿಕೊಳ್ಳುತ್ತಿರುವುದಾಗಿ ಆರೋಪಿಸಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯತಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗದಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸದೆ ಇದ್ದುದರಿಂದ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿಗೆ ಬೀಡ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಊರಿನ ಪಕ್ಕದಲ್ಲಿಯೇ  ಬೆಂಗಳೂರಿನವರಿಗೆ ಸಂಬಂದಿಸಿದ ಜಮೀನಿನಲ್ಲಿ ಕಳೆದ  ನಾಲ್ಕು ವರ್ಷಗಳಿಂದ ಮಂಜನಾಥ ಮತ್ತು ಕುಂಟುಂಬದವರು ಕೋಳಿ ಫಾರಂ ಶೆಡ್ ನಿರ್ಮಿಸಿ  ಸಾವಿರಾರು ಕೋಳಿಗಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ, ಇದರಿಂದ ಗ್ರಾಮದಲ್ಲಿ ದುರ್ವಾಸನೆ ಹೆಚ್ಚಾಗಿ ಜನರು ನರಳುತ್ತಿದ್ದು ಫಾರಂನಲ್ಲಿ ಸತ್ತ ಕೋಳಿಗಳನ್ನು ರಸ್ತೆಗೆ ಎಸೆಯುವುದರಿಂದ ನಾಯಿಗಳು ತಿಂದು ಹಸಿ ಮಾಂಸದ ರುಚಿ ಕಂಡ ನಾಯಿಗಳು ಊರ ಮಕ್ಕಳ ಹಾಗೂ ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತಿವೆ ಮತ್ತು ಇದರಿಂದ ಊರಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾ. ಪಂ. ಸದಸ್ಯರಾದ  ಸಿದ್ದಗಂಗಮ್ಮ, ರಾಧಮ್ಮ, ನರಸಿಂಹಯ್ಯ ಗ್ರಾಮಸ್ಥರಾದ ರಘುನಾಥ್, ನಾಗರಾಜು, ಮಂಜುನಾಥ, ಪ್ರಕಾಶ್, ಲಿಂಗರಾಜು, ಸಾವಿತ್ರಮ್ಮ, ಜಯಮ್ಮ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement