ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾತ್ಯತೀತ ದೇಶದಲ್ಲಿ ನಾವೆಲ್ಲರೂ ಒಂದೇ ಅನ್ನುವ ಭಾವನೆ ಅಗತ್ಯ

Rashmi Kasaragodu
Updated On : 8 Aug 2013, 12:28 pm

ಶಿರಾ: ಜ್ಯಾತ್ಯತೀತ ದೇಶದಲ್ಲಿ ನಾವೆಲ್ಲರೂ ಒಂದೇ ಅನ್ನುವ ಭಾವನೆ ಎಲ್ಲರಲ್ಲೂ ಮೇಳೈಸಬೇಕು. ಅಪರಾದ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಂದೋಬಸ್ತಿನ ಕ್ರಮವನ್ನು ಪ್ರಾಮಾಣಿಕವಾಗಿ ಕೈಗೊಳ್ಳುತ್ತದೆ ಎಂದು ಡಿ.ಎಸ್.ಪಿ. ಜಗದೀಶ್ ತಿಳಿಸಿದರು.
ಅವರು ನಗರ ಆರಕ್ಷಕ ಠಾಣೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ದಿನಮಾನಗಳಲ್ಲಿ ಜಾತೀಯ ಭಾವನೆಗಳು ಅತ್ಯಂತ ಕಡಿಮೆಯಾಗುತ್ತಿದ್ದು ಪ್ರತಿಯೊಬ್ಬರು ಆತ್ಮೀಯ ಸಹಬಾಳ್ವೆ. ಶಾಂತಿ-ಸೌಹಾರ್ದತೆಯಿಂದ ಬದುಕಿದರೆ ಇಡೀ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಅಪರಾಧಗಳನ್ನು ಪದೇ ಪದೇ ಮಾಡುವ ವ್ಯಕ್ತಿ ಮುಂದೊಂದು ದಿನ ದೊಡ್ಡ ಅಪರಾಧಿಯೇ ಆಗುತ್ತಾನೇ. ಪೋಷಕರು ತಮ್ಮ ಮಕ್ಕಳನ್ನು ಜೋಪಾನವಾಗಿ ಅಪರಾಧ ಮುಕ್ತರನ್ನಾಗಿಸಲು ಕ್ರಿಯಾಶೀಲ ಪ್ರಯತ್ನ ಮಾಡಬೇಕಾಗುತ್ತದೆ ಎಂದರು.
ಮಾಜಿ ಶಾಸಕ ಎಸ್.ಕೆ.ದಾಸಪ್ಪ, ಹಿರಿಯ ಸಹಕಾರಿ ಧುರೀಣ ಎಸ್.ಎನ್.ಕೃಷ್ಣಯ್ಯ. ನಗರಸಭಾ ಸದಸ್ಯ ಚಾಂದ್ ಪಾಷಾ, ಸಿ.ಪಿ.ಐ. ಪ್ರಹ್ಲಾದ್, ಪಿ.ಎಸ್.ಐ. ರಾಧಾಕೃಷ್ಣ, ದಯಾನಂದ ಸಾಗರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement