ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದಸೂಡಿ ಕ್ಷೇತ್ರದಿಂದ ಡಿ.ಟಿ.ರಂಗನಾಥ್ ಆಯ್ಕೆ

Rashmi Kasaragodu
Updated On : 8 Aug 2013, 12:23 pm

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತತಿಗಳ ಉಪಚುನಾವಣೆಯಲ್ಲಿ ಆಯ್ತೆಯಾದ ಅಭ್ಯರ್ಥಿಗಳಿಗೆ ಚುನಾವಣಾ ಶಿರಸ್ತೇದಾರ್ ಶಿವಶಂಕರ್ ದೃಢೀಕರಣ ಪತ್ರ ನೀಡಿದರು.
ಆಗಸ್ಟ್ 4ರಂದು ನಡೆದ ದಸೂಡಿ ಗ್ರಾ.ಪಂ.ಚುನಾವಣೆ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯ ನಡೆದಿದೆ. ದಸೂಡಿ ಗ್ರಾಮಪಂಚಾಯ್ತಿಯಲ್ಲಿ ದಸೂಡಿ ಕ್ಷೇತ್ರದಲ್ಲಿ ಡಿ.ಟಿ.ರಂಗನಾಥ್ ಆಯ್ಕೆಯಾಗಿದ್ದಾರೆ. ಉಳಿದ ಗ್ರಾಮಪಂಚಾಯ್ತಿಗಳಾದ ದೊಡ್ಡಎಣ್ಣೇಗೆರೆ ಗ್ರಾಮಪಂಚಾಯ್ತಿಯ ಚಿಕ್ಕಎಣ್ಣೆಗೆರೆ ಕ್ಷೇತ್ರದಿಂದ ಶಾರದಮ್ಮ, ತಿಮ್ಮನಹಳ್ಳಿ ಗ್ರಾ.ಪಂ. ಡಿ.ಹೆಚ್.ನಾಗರಾಜು ಮತ್ತು ಅನಿತಾ, ಕುಪ್ಪೂರು ಗ್ರಾ.ಪಂ.ಕೆ.ಎನ್.ಸುರೇಶ್, ತೀರ್ಥಪುರ ಗ್ರಾ.ಪಂ.ಯ ದೊಡ್ಡರಾಂಪುರ ಕ್ಷೇತ್ರದ ಮಲ್ಲಿಕಾರ್ಜುನಯ್ಯ, ಚಿಕ್ಕರಾಂಪುರ ಕ್ಷೇತ್ರದ ಮಂಜುಳ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಶಿರಸ್ತೇದಾರ್ ಶಿವಶಂಕರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ನೂರುಲ್ಲಾ, ಗ್ರಾ.ಪಂ.ಯ ಸೋಮಶೇಖರ್, ದೊಡ್ಡರಾಂಪುರ ಮಾಜಿ ಸದಸ್ಯ ನಾಗರಾಜು ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement