ಶೆಟ್ಟಿಕೆರೆ ಕ್ಷೇತ್ರದಿಂದ ಧನಂಜಯ ಆಯ್ಕೆ
ಕುಣಿಗಲ್: ಕಳೆದ ಭಾನುವಾರ ವಿವಿಧ ಕಾರಣಗಳಿಂದ ತೆರವಾಗಿದ್ದ ವಿವಿಧ ಗ್ರಾಮಪಂಚಾಯಿತಿಯ ಮೂರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಾಗೇನಹಳ್ಳಿ ಗ್ರಾಪಂನ ಶೆಟ್ಟಿಕೆರೆ ಕ್ಷೇತ್ರದಿಂದ ಧನಂಜಯ, ತಾವರೆಕೆರೆ ಗ್ರಾಪಂನ ಬ್ಯಾಡರಹಳ್ಳಿ ಕ್ಷೇತ್ರದಿಂದ ಬಿ.ಸಿ.ರಾಮಣ್ಣ, ಜಿನ್ನಾಗರ ಗ್ರಾಪಂನ ಬೆಳ್ಳಿಕೆರೆ ಕ್ಷೇತ್ರದಿಂದ ಸರೋಜಮ್ಮ ಆಯ್ಕೆಯಾಗಿದ್ದಾರೆ