ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹುಲಿಯೂರುದುರ್ಗ ಹೋಬಳಿಯಲ್ಲಿ ಚಿರತೆ ಹಾವಳಿ ವಿಪರೀತ: ಕ್ರಮಕ್ಕೆ ಮನವಿ

Rashmi Kasaragodu
Updated On : 8 Aug 2013, 12:24 pm

ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಚಿರತೆ ಹಾವಳಿಯಿಂದ ಜನ, ಜಾನುವಾರುಗಳನ್ನು ಸಂರಕ್ಷಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಹುಲಿಯೂರುದುರ್ಗ ಹೋಬಳಿಯ ಬಂಡೀಹಳ್ಳಿ ಸಮೀಪದಲ್ಲಿ ದೇವಾಲಯ ಅರ್ಚಕನ ಮೇಲೆ ಮೂರು ದಿನಗಳ ಹಿಂದೆ ಚಿರತೆ ಹಲ್ಲೆ ನಡೆಸಿರುವ ಘಟನೆ ಇನ್ನು ಹಸಿರಾಗಿರುವಾಗಲೆ, ಬುಧವಾರ ಬೆಳಗಿನ ಜಾವ ಹುಲಿಯೂರುದುರ್ಗ ಸಮೀಪದ ಶಿವನಹಳ್ಳಿ ಗ್ರಾಮದಲ್ಲಿ ರೈತ ಪುಟ್ಟಸ್ವಾಮಯ್ಯನ ಮನೆ ಮುಂದೆ ಕಟ್ಟಲಾಗಿದ್ದ ಎಮ್ಮೆಯ ಮೇಲೆ ಚಿರತೆ ಹಲ್ಲೆ ನಡೆಸಿದ ಕಾರಣ, ಎಮ್ಮೆ ಮೃತಪಟ್ಟಿದೆ. ರೈತ ಪುಟ್ಟಸ್ವಾಮಯ್ಯ ನೀಡಿದ ದೂರಿನ ಮೇಲೆ ಪೊಲೀಸರು ಸೇರಿದಂತೆ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರೈತರು ಚಿರತೆ ಹಾವಳಿ ನಿಯಂತ್ರಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement