ವಿವಿಧ ಯೋಜನೆಗೆ ಬಿಡುಗಡೆಯಾದ ಅನುದಾನ ದುರುಪಯೋಗ: ಮುಖ್ಯ ಶಿಕ್ಷಕ ಅಮಾನತು
ಮಧುಗಿರಿ: ಶಾಲಾ ಶೈಕ್ಷಣಿಕ ಪ್ರಗತಿಗೆ ವಿವಿಧ ಯೋಜನಗಳಿಗೆ ಬಿಡುಗಡೆ ಮಾಡಿದ್ದ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮುಖ್ಯ ಶಿಕ್ಷಕರೊಬ್ಬರನ್ನು ಡಿಡಿಪಿಐ ಟಿ.ಎಸ್.ಆಂಜನಪ್ಪ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ..
ಪಾವಗಡ ತಾಲೂಕಿನ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ಆಂಜನೇಯ ಅಮಾನತ್ತುಗೊಂಡ ಮುಖ್ಯ ಶಿಕ್ಷಕರಾಗಿದ್ದು ಇವರು ಮಕ್ಕಳಿಗೆ ಕುಡಿಯುವ ನೀರು ಮತ್ತು ಶೌಚಾಲಯದ ಹಣ 50 ಸಾವಿರ ರು.ಸಂಗೀತದ ಉಪಕರಣದ ಬಾಬ್ತು 1500, ಸಾವಿರ ರು.ಶಾಲಾಭಿವೃದ್ಧಿ ಸಮಿತಿ ಗಮನಕ್ಕೂ ಬಾರದೆ 75 ಸಾವಿರ ರು.ಗಳನ್ನು ಸ್ವಂತಕ್ಕೆ ಬ್ಯಾಂಕಿನಿಂದ ಡ್ರಾ ಮಾಡಿಕೊಂಡಿರುವುದು ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆ ಕಾರಣಕ್ಕಾಗಿ ಮುಖ್ಯ ಶಿಕ್ಷಕ ಆಂಜನೇಯ ಅವರನ್ನು ಅಮಾನತ್ತುಗೊಳಿಸಿ ಡಿಡಿಪಿಐ ಆಂಜನಪ್ಪ ಆದೇಶ ಹೊರಡಿಸಿದ್ದಾರೆ.