ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಧುಗಿರಿ: ರಂಜಾನ್ ಆಚರಣೆ

Mainashree
Updated On : 9 Aug 2013, 11:46 am

ಮಧುಗಿರಿ: ಮಧುಗಿರಿಯಲ್ಲಿ ಮುಸ್ಲಿಂ ಬಾಂಧವರು ಪವಿತ್ರವಾದ ರಂಜಾನ್ ಹಬ್ಬವನ್ನು  ಸಡಗರ-ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಶಿರಾ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ  ಸಮಾವೇಶಗೊಂಡ ಮುಸ್ಲಿಂ ಭಾಂದವರು  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಶಾಸಕ ಕೆ.ಎನ್.ರಾಜಣ್ಣ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ  ಕೋರುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು. ನಂತರ ಮಾತನಾಡಿದ ರಾಜಣ್ಣ ಶ್ರದ್ಧಾ ಭಕ್ತಿಯಿಂದ ಆಚರಿಸುವ ಈ ಹಬ್ಬ  ಪ್ರತಿಯೊಬ್ಬರಿಗೂ ಒಳಿತುಂಟು ಮಾಡಲಿ ಎಂದು ಹಾರೈಸಿದರು. ಪುರಸಭೆ ಸದಸ್ಯ ಅಯೂಬ್, ಸಾಧಿಕ್, ಅಲೀಂ, ಸೇರಿದಂತೆ ಅನೇಕ ಗಣ್ಯರು ಇದ್ದರು.

ಹುಳಿಯಾರಿನಲ್ಲಿ ಸಾಮೂಹಿಕ ಪ್ರಾರ್ಥನೆ
ಹುಳಿಯಾರು: ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಅನ್ನು ಹುಳಿಯಾರು ಹೋಬಳಿಯ ಮುಸ್ಲಿಂ ಬಾಂಧವರು ಹೊಸ ಉಡುಪುಗಳ ಧರಿಸಿ, ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಶುಕ್ರವಾರದಂದು ಸಡಗರ ಸಂಭ್ರಮದಿಮದಿಂದ ಆಚರಿಸಿದರು.
ಒಂದು ತಿಂಗಳ ಉಪವಾಸ ಮಾಡುವ ಮೂಲಕ ದೇಹ ದಂಡನೆ ಮಾಡಿ ನಂತರ ದಾನ, ಧರ್ಮದ ಸಂಕೇತವಾಗಿ ಬಡವ, ಶ್ರೀಮಂತರು  ಬೇಧಬಾವವಿಲ್ಲದೆ ತಾವೆಲ್ಲ ಒಂದೇ ಎಂಬ ವಿಶಾಲ ಮನೋಭಾವದಿಂದ ಶಾಂತಿಯ ಸಂಕೇತವಾಗಿ ಎಲ್ಲರು ಒಗ್ಗೂಡಿ ನಮಾಜ್ ಮಾಡುವ ಮೂಲಕ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ಹಂಚಿಕೊಂಡರು. ಹಬ್ಬದ ಅಂಗವಾಗಿ ಮುಸ್ಲಿಂ ಮಹಿಳೆಯರು, ಪುರುಷರು ಸೇರಿದಂತೆ ಪುಟಾಣಿ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದ್ದು ವಿಶೇಷವಾಗಿ ಕಂಡುಬಂದಿತು.
ಹುಳಿಯಾರಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಅನ್ವರ್ ಮಾತನಾಡಿ, ಶಾಂತಿಯ ಸಂಕೇತವಾಗಿ ರಂಜಾನ್ ಆಚರಣೆ ನಡೆದು ಬಂದಿದ್ದು, ಪ್ರತಿಯೊಬ್ಬರೂ ತಾವು ಜೀವನದಲ್ಲಿ ಮಾಡಿದಂತಹ ತಪ್ಪು ಕಾರ್ಯಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ರಂಜಾನ್ ಉಪವಾಸ ನಡೆದುಕೊಂಡು ಬಂದಿರುವುದಾಗಿ ತಿಳಿಸಿದರು. ಎಲ್ಲಾ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆಯನ್ನು ಪಠಿಸಿ ನಂತರ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಜಾಮೀಯ ಮಸಿದಿಯ ಮುತುವಲ್ಲಿ ಜಬೀಉಲ್ಲಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಅನ್ಸರ್ ಅಲಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಜಹೀರ್ ಸಾಬ್, ಮುಖಂಡರಾದ ಡಾ.ಬಾಬು, ನಂದಿಹಳ್ಳಿ ಶಿವಣ್ಣ ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement