ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ
ಕೊರಟಗೆರೆ: ಕೊರಟಗೆರೆ ಸುವರ್ಣಮುಖಿ ನದಿ ತೀರದಲ್ಲಿರುವ ಜಂಪೇನಹಳ್ಳಿಯಲ್ಲಿ ಸುವರ್ಣಮುಖಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರತಿ ಶನಿವಾರ ವಿಶೇಷ ಪೂಜೆ, ಪ್ರಸಾದ ವತರಣೆ ಕಾರ್ಯಕ್ರಮ ನಡೆಯಲಿದೆ. ಶನಿವಾರ (ಆ.10) ದಂದು ಸ್ವಾಮಿಗೆ ತುಳಸೀ ಅಲಂಕಾರ, ಆ. 17 ರಂದು ಅರಿಷಿನ ಅಲಂಕಾರ, ಆ.24 ರಂದು ಬೆಳ್ಳಿ ಒಡವೆ ಅಸಂಕಾರ, ಆ.31 ರಂದು ಹೂವಿನ ಅಲಂಕಾರ ನಡೆಯಲಿದೆ.
ಆ.24 ರಂದು ಕಲ್ಯಾಣೋತ್ಸವ ನಡೆಯಲಿದೆ. ಆ. 31 ರ ಕೊನೆಯ ಶ್ರಾವಣ ಶನಿವಾರದಂದು ಸಾಯಂಕಾಲ 6 ಕ್ಕೆ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಆರ್ಯವೈಶ್ಯ ಮಹಿಳೆಯರಿಂದ ದಾಸರ ಗೀತೆಗಳ ಗಾಯನ ನಡೆಯಲಿದೆ. ಈ ಕುರಿತು ಹೆಚ್ಚಿನ ವಿವರಕ್ಕೆ ಮೊಬೈಲ್ 9844418522, 9164847951, 9844418522 ಸಂಪರ್ಕಿಸಬಹುದು.