ಪತ್ರಿಕೆಗಳ ಮೇಲೆ ಮಹತ್ತರ ಜವಾಬ್ದಾರಿ
ಕ.ಪ್ರ.ವಾರ್ತೆ ಮಧುಗಿರಿ ಆ.10
ಸಮಾಜದಲ್ಲಿ ತಪ್ಪು ಹೆಜ್ಜೆ ಇಡುವವರನ್ನು ಸರಿ ದಾರಿಗೆ ತರುವ ಮಹತ್ತರ ಜವಾಬ್ದಾರಿ ಪತ್ರಿಕೆಗಳ ಮೇಲಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಪಟ್ಟಣದ ರೋಟರಿ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಧುಗಿರಿ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ರಾಜಕಾರಣಿಗಳನ್ನು ಸಂಶಯದಿಂದ ಕಾಣುವ ಕಾಲ ಇದಾಗಿದ್ದು ಪತ್ರಿಕೆಗಳಲ್ಲಿ ಸತ್ಯ ಹೊರ ಬಂದಾಗ ಮಾತ್ರ ಜನರು ನಂಬುತ್ತಾರೆ.ಹಾಗಾಗಿ ಕವಲು ದಾರಿ ಹಿಡಿಯುವ ಜನರನ್ನು ಸರಿಪಡಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದರು.
ಪತ್ರರ್ಕತರು ತಮ್ಮ ಜವಾಬ್ದಾರಿ ಅರಿತು ಸುದ್ದಿ ಮಾಡಬೇಕು.ಪತ್ರಿಕೆಗಳು ಸಾಮರಸ್ಯ ಮೂಡಿಸಬೇಕೆ ಹೊರತು ಸಮಾಜದ ಸ್ವಾಸ್ಥ್ಯ ಕೆಡಿಸ ಬಾರದು ಎಂದು ಎಚ್ಚರಿಸಿ,ತಾವೂ ಬರೆಯುವ ಲೇಖನಗಳು ಅಭಿವೃದ್ಧಿಗೆ ಪೂರಕವಾಗಿರಬೇಕು.ಪತ್ರಕರ್ತರಿಗೆ ನಿವೇಶನ,ಪತ್ರಿಕಾ ಭವನ ನಿರ್ಮಿಸಿ ಕೊಡುವುದಾಗಿ ರಾಜಣ್ಣ ಭರವಸೆ ನೀಡಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಧಾನ ಸಂಪಾದಕ ಹುಣಸವಾಡಿ ರಾಜನ್ ಪ್ರಭು ಮತ್ತು ಪ್ರಜೇಗಳ ನಡುವೆ ಸೌಹಾರ್ದ ಏರ್ಪಡದೇ ಪ್ರಜಾಪ್ರಭುತ್ವ ಯಶಸ್ವಿಯಾಗಲಾರದು.ಅಕ್ಷರಕ್ಕೆ ಅಂಹಕಾರದ ಧೂಳು ಮೆತ್ತಿಕೊಳ್ಳ ಬಾರದು ಎಲ್ಲವನ್ನು ಆಳುವವರ ಮೇಲೆ ಗೂಬೆ ಕೂರಿಸಿ ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಸಮಾಜದ ಏಳಿಗೆ ಬಗ್ಗೆ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಬೇಕು. ನೈತಿಕತೆ ಇಲ್ಲದೆ ಬರಿ ಮಾತುಗಳಿಂದ ಏನನ್ನು ಸಾಧಿಸಲಾಗದು ರಾಜಕೀಯ ಪಕ್ಷಗಳು ಹೊಸ ಅಯಾಮ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಎಲ್ಲರು ಎಚ್ಚರ ವಹಿಸಬೇಕು. ಬಾಡಿಗೆ ಚಳುವಳಿಗಳಿಂದ ಎತ್ತಿನ ಹೊಳೆ,ಆನೆ ಹೊಳೆಯಾಗಲಾರದು ಸಾರ್ವಜನಿಕರ ಚಳುವಳಿಗಳು ಸ್ಪಷ್ಟ ಉದ್ದೇಶ ಖಚಿತ ನಿಲವು ಹೊಂದಿದಾಗ ಮಾತ್ರ ಸರ್ಕಾರದ ಗಮನ ಸಳೆಯಲು ಸಾಧ್ಯ,ಸಮಾಜದ ಪ್ರಗತಿಗೆ ಮುಖಂಡರ ನಡುವೆ ಬೆಸುಗೆ ಹಾಕಿ ಪತ್ರರ್ಕರು ಸಮಾಜದ ಒಳಿತಿಗಾಗಿ ಶ್ರಮಿಸಿ, ಆಳುವವರು ಮ್ತತು ಪ್ರಜೆಗಳ ನಡುವೆ ಮಧುರ ಬಾಂಧವ್ಯ ಏರ್ಪಡಿಸಬೇಕು. ಪತ್ರರ್ಕರು ತಂತಮ್ಮಲ್ಲಿ ಸೌಹಾರ್ದ ಬೆಳಸಿಕೊಂಡು ಆರೋಗ್ಯಕರ ಸಮಾಜ ಕಟ್ಟಲು ನೆರವಾಗಬೇಕು.ಇಂದಿನ ಮಾಧ್ಯಮಗಳಿಗೆ ಪೊರೆ ಬಂದಿದ್ದು, ಪೊರೆ ತೆಗೆಯಬೇಕೀದ್ದು ಮನಸ್ಸು ಕಟ್ಟುವ ಮೂಲಕ ದೇಶ ಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಮತ್ತು ಹಕ್ಕು ಒಂದೇ ನಾಣ್ಯದ ಎರಡು ಬದಿಗಳೂ,ಅರಿತಾಗಲೇ ಒಳಿತು ಸಾಧಿಸಲು ಸಾಧ್ಯ ಎಂದರು.
ಜಿಲ್ಲಾ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್ ಶಾಸಕ ಕೆ.ಎನ್.ರಾಜಣ್ಣ ಅವರು ಆಂಧ್ರ ಮಾದರಿಯಲ್ಲಿ ಪತ್ರಕರ್ತರಿಗೆ ನಿವೇಶನ,ಮನೆ ಪತ್ರಿಕಾ ಭವನ ನಿರ್ಮಿಸಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.ಪತ್ರಕರ್ತ ನಂಜುಂಡಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು.
ತಾ.ಸಂಘದ ಅಧ್ಯಕ್ಷ ವಿ.ಎಚ್.ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕಿದಿಯೂರು ಸುಬ್ಬರಾವ್, ಆರ್.ಸಿ.ವಿಜಯ ಕುಮಾರ್ ಜೈನ್,ಕೆಯುಡಬ್ಲ್ಯೂಜೆ ಸದಸ್ಯ ಜಿ.ಇಂದ್ರಕುಮಾರ್,ಈರಣ್ಣ, ಜಿ.ಪಂ.ಸದಸ್ಯೆ ಮಂಜುಳಾ ವಿರೇಂದ್ರ ಪ್ರಸಾದ್,ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಸ್.ನಾಗೇಂದ್ರ ಸ್ವಾಗತಿಸಿ ಜಿ.ನಾರಾಯಣರಾಜು ನಿರೂಪಿಸಿ ಟಿ.ಪ್ರಸನ್ನ ಕುಮಾರ್ ವಂದಿಸಿದರು.