ಮಾನವನ ದುರಾಸೆಯಿಂದ ಅರಣ್ಯ ಪ್ರದೇಶ ವಿನಾಶ
ಗುಬ್ಬಿ: ಮಾನವನ ದುರಾಸೆಯಿಂದ ಅರಣ್ಯ ಪ್ರದೇಶ ವಿನಾಶದಂಚಿಗೆ ತಲುಪಿರುವ ಕಾರಣ ದಿನೇ ದಿನೇ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು ಅಂತರ್ಜಲ ಕುಸಿತದಂತಹ ಸಮಸ್ಯೆಗಳು ಎದುರಾಗುವುದಲ್ಲದೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಸಾವಯವ ಕೃಷಿಕ ಶಂಕರಪ್ಪ ತಿಳಿಸಿದರು.
ಗುಬ್ಬಿ ತಾಲೂಕಿನ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾರ್ಲ್ಸ್ ಡಾರ್ವಿನ್ ಇಕೊ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಸಾವಯವ ಕೃಷಿ ಇಂದಿನ ಅನಿವಾರ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ತಾಪಮಾನವೂ ಹೆಚ್ಚುತ್ತಿದ್ದು 180 ಪಿ.ಪಿ.ಎಂ.ಗಳಷ್ಟಿದ್ದ ತಾಪಮಾನ 230 ಪಿ.ಪಿ.ಎಂ.ಗೆ ಏರಿಕೆ ಯಾಗಿದೆ. ಇದರಿಂದ ಹಮಾನದಲ್ಲಿ ಹಲವು ರೀತಿಯ ವಿದ್ಯಾಮಾನಗಳು ನಡೆಯುತ್ತಿದ್ದು ವಿಕೋಪಗಳು ಹೆಚ್ಚಾಗತೊಡಗಿವೆ ಈ ನಿಟ್ಟಿನಲ್ಲಿ ವಿದ್ಯಾವಂತ ಯುವಕರು ಗಿಡ ಮರಗಳನ್ನುವ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಮುಖ್ಯ ಶಿಕ್ಷಕ ಎಚ್.ಕೆ.ಕರಿಯಪ್ಪ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮಹತ್ವ ನೀಡುತ್ತಿದ್ದು ವಿವಿಧ ಸಂಘಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಪ್ರಗತಿ ಪಥದತ್ತ ಸಾಗುವಂತೆ ಕರೆ ನೀಡಿದರು.