ಇಂದು ಸ್ವಾಗತ ಸಮಾರಂಭ
ತುಮಕೂರು: ಇಲ್ಲಿಗೆ ಸಮೀಪದ ಹೆಬ್ಬೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.13 ರಂದು ಬೆಳಗ್ಗೆ 11 ಗಂಟೆಗೆ 2013-14ನೇ ಸಾಲಿನ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿದೆ. ಉದ್ಘಾಟನೆಯನ್ನು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಕೆ.ಸಿ. ರಘು, ಪಿ. ಸಿದ್ದರಾಜು, ಡಾ. ಎಂ. ಕೊಟ್ರೇಶ್, ಜಿ.ಆರ್. ಶಾಂತಮ್ಮ ಆಗಮಿಸುವರು. ಅಧ್ಯಕ್ಷತೆಯನ್ನು ಪ್ರೊ. ಬಿ.ಸಿ. ಸಣ್ಣಚಿಕ್ಕಯ್ಯ ವಹಿಸಲಿದ್ದಾರೆ.
20 ಕ್ಕೆ ಉಪಕರ್ಮ
ತುಮಕೂರು: ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ಆ. 20 ರಂದು ಮಂಗಳವಾರ ಋರ್ಗ್ವೇದ ಮತ್ತು ಯಜುರ್ವೇದ ಉಪಕರ್ಮವನ್ನು ಬೆಳಗ್ಗೆ 7.30 ಕ್ಕೆ ಏರ್ಪಡಿಸಲಾಗಿದೆ. ಋರ್ಗ್ವೇದ ಉಪಕರ್ಮ ಕೆ.ಎಸ್. ಪುರುಷೋತ್ತಮ ಮತ್ತು ಯಜುರ್ವೇದ ಉಪಕರ್ಮ ಬಿ.ಎಸ್. ರಾಮಸ್ವಾಮಿಗಳ ಆಚಾರ್ಯತ್ವದಲ್ಲಿ ನಡೆಯುತ್ತದೆ.