ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೋಗ್ ಪ್ರವಾಸ

Rashmi Kasaragodu
Updated On : 13 Aug 2013, 12:07 pm

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಆ.17 ರ ಶನಿವಾರ ತುಮಕೂರಿನಿಂದ ಭೋರ್ಗರೆಯುವ ಜೋಗ್ ಜಲಪಾತದ ವೀಕ್ಷಣೆಗಾಗಿ ಪ್ರತ್ಯೇಕವಾಗಿ ಒಂದು ದಿನದ ಪ್ರವಾಸವನ್ನು ಕಲ್ಪಿಸಲಾಗಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಪ್ರವಾಸ ಹೊರಡಲಿದ್ದು, ಅವತಾರ್ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು  ಸಹ ಕಲ್ಪಿಸಲಾಗಿದ್ದು, ಪ್ರವಾಸ ದರ  ವಯಸ್ಕರಿಗೆ 600 ರು. ಮಕ್ಕಳಿಗೆ 400 ರು. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7760990913, 7760990935 ಸಂಪರ್ಕಿಸುವಂತೆ ವಿಭಾಗೀಯ  ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ.
ಸಮಿತಿ ಸಭೆ
ತುಮಕೂರು ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಅರ್ಧ ವಾರ್ಷಿಕ ಸಭೆಯನ್ನು ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗವಿರುವ ಬಾಪೂಜಿ ಆಶ್ರಮದಲ್ಲಿ ಆ. 15 ರಂದು ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ. ಸಭೆಯಲ್ಲಿ ಆಡಳಿತ ವರ್ಗದ ಬದಲಾವಣೆ, ಸಂಘದ ಖರ್ಚು ವೆಚ್ಚದ ಬಗ್ಗೆ ಚರ್ಚೆ, ಸೈನಿಕ ಕಲ್ಯಾಣ ಮತ್ತು
ಪುನರ್ವಸತಿ ಇಲಾಖೆಯವರು ಕೊಡುವ ಶಿಷ್ಯವೇತನದ ಅರ್ಜಿ ಫಾರಂಗಳನ್ನು ವಿತರಿಸಲಾಗುವುದು ಹಾಗೂ ಮಾಜಿ ಸೈನಿಕರ ಪಿಂಚಣಿಯ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ತಮ್ಮ ಪಿ.ಪಿ.ಓ. ಹಾಗೂ ಬ್ಯಾಂಕ್ ಪಾಸ್ ಪುಸ್ತಕ ತಂದರೆ ಸಂಶಯವನ್ನು ಅಂದೇ ನಿವಾರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಸಿಕಾ ಕಾರ್ಯಕ್ರಮ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ತುಮಕೂರು ಜಿಲ್ಲಾ ವತಿಯಿಂದ  ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಎಲ್ಲಾ  ದನ ಮತ್ತು ಎಮ್ಮೆಗಳಿಗೆ ಕಾಲು ಬಾಯಿ ಜ್ವರದ 5 ನೇ ಸುತ್ತಿನ ಉಚಿತ ಸಾಮೂಹಿಕಾ ಲಸಿಕಾ ಕಾರ್ಯಕ್ರಮವನ್ನು ಆ.12 ರಿಂದ ಸೆ.11 ರವರೆಗೆ ಒಂದು ತಿಂಗಳವರೆಗೆ ಹಮ್ಮಿಕೊಳ್ಳಲಾಗಿದೆ. ಈ ಲಸಿಕಾ ಕಾರ್ಯಕ್ರಮವು ಐದು  ವರ್ಷಗಳ ಅವಧಿಯದ್ದಾಗಿದ್ದು, ಪ್ರತಿ ವರ್ಷ ಜನವರಿ, ಫೆಬ್ರವರಿ ಮತ್ತು ಆಗಸ್ಟ್, ಸೆಪ್ಟೆಂಬರ್ ಮಾಹೆಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಈ ಕಾಯಿಲೆಯಿಂದ ತಮ್ಮ ಜಾನುವಾರುಗಳನ್ನು ಪಾರುಮಾಡಲು ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಚುನಾವಣೆ ಮುಂದಕ್ಕೆ
ಬೆಂಗಳೂರು ಗ್ರಾಮಾಂತರ ಲೋಕಸಭಾ  ಉಪಚುನಾವಣಾ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಆ.25 ರಂದು ನಿಗದಿ ಪಡಿಸಲಾಗಿದ್ದ ಚುನಾವಣೆಯನ್ನು ಸೆ. 7 ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement