ಸಿದ್ದರಾಮಯ್ಯ 66ನೇ ಹುಟ್ಟು ಹಬ್ಬ ಆಚರಣೆ
ತಿಪಟೂರು: ಮುಖ್ಯಮಂತ್ರಿ ಸಿದ್ದರಾಮಯ್ಯವರ 66ನೇ ಹುಟ್ಟು ಹಬ್ಬವನ್ನು ಇಂದು ಬೆಳಿಗ್ಗೆ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಬ್ರೆಡ್ ಮತ್ತು ಹಣ್ಣನ್ನು ವಿತರಿಸುವ ಮೂಲಕ ತಾಲೂಕು ಕುರುಬ ಸಮಾಜದ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಕೆ.ಷಡಕ್ಷರಿ, ರಾಜ್ಯ ಕನಕ ನೌಕರರ ಸಂಘದ ಪ್ರ.ಕಾರ್ಯದರ್ಶಿ ಜಿ.ಆರ್.ಜಯರಾಂ, ಕುರುಬ ಸಮಾಜದ ತಾಲೂಕು ಮುಖಂಡರಾದ ಹಾವೇನಹಳ್ಳಿ ಶಂಕರಪ್ಪ, ಹೊನ್ನೇನಹಳ್ಳಿ ಮಹಲಿಂಗಪ್ಪ, ಬಸವರಾಜು, ತಾ.ಪಂ. ಮಾಜಿ ಅಧ್ಯಕ್ಷೆ ಗೌರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್, ನಗರಾಧ್ಯಕ್ಷ ಶಶಿಧರ್ ಮತ್ತು ತಾ. ಕಾಂಗ್ರೆಸ್ ವಕ್ತಾರ ಕೆ.ಎಸ್. ಸದಾಶಿವಯ್ಯ ಮತ್ತಿತರರಿದ್ದರು.
ಶ್ರೀ ಶನೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಪೂಜೆ
ತಿಪಟೂರು: ನಗರದ ನೀಲಕಂಠಸ್ವಾಮಿ ಸರ್ಕಲ್ನಲ್ಲಿರುವ ಶ್ರೀ ಶನೇಶ್ವರ ಸ್ವಾಮಿ 42ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜಾ ಮಹೋತ್ಸವವು ಆ.17ರಿಂದ ಸೆ.2ರವರೆಗೆ ನಡೆಯಲಿದೆ. ಆ.17ರಂದು ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ, ಅರಿಶಿಣ ಕುಂಕುಮ ಅಲಂಕಾರ, ಆ.24ರಂದು ಪಂತಾಮೃತಾಭಿಷೇಕ, ಹತ್ತಿ ಅಲಂಕಾರ. ಆ.31ರಂದು ಬೆಣ್ಣೆ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ ಹಾಗೂ ಶನಿಪ್ರಭಾವ ಹರಿಕಥೆ ಇರುತ್ತದೆ. ಆ.25ರಂದು ಅನ್ನಸಂತರ್ಪಣೆ ನಡೆಯಲಿದೆ. ಸೆ.2 ಶ್ರೀ ಸ್ವಾಮಿಯವರ ಅಲಂಕಾರದೊಂದಿಗೆ ಜಾನಪದ ಕಲಾತಂಡಗಳೊಂದಿಗೆ ಉತ್ಸವ ನಡೆಯಲಿದೆ.