ಜಾಗೃತಿ ಅರಿವು ಜಾಥಾ
ತುಮಕೂರು: ಇನ್ಟ್ರ್ಯಾಕ್ಟ್ ಕ್ಲಬ್ ಮಾರುತಿ ವಿದ್ಯಾಕೇಂದ್ರ, ಮತ್ತು ರೋಟರಿ ಪೂರ್ವ ಸಹಯೋಗದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಜಾಗೃತಿ ಅರಿವು ಜಾಥಾ ನಡೆಸಲಾಯಿತು. ನಗರದ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಿಂದ ಹೊರಟ ಜಾಥ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಅಶೋಕ ರಸ್ತೆಯ ಮೂಲಕ ಟೌನ್ಹಾಲ್ವರೆಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಪೂರ್ವ ಅಧ್ಯಕ್ಷ ಸುರೇಶ್ ಮಾತನಾಡಿ ರೋಟರಿ ವತಿಯಿಂದ ನಮ್ಮ ರಾಷ್ಟ್ರ ಧ್ವಜ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಳೆದ ಐದು ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಬೀಡಿ, ಸಿಗರೇಟು, ಮಾದಕ ವಸ್ತುಗಳಾದ ಗಾಂಜ, ಬ್ರೌನ್ ಶುಗರ್, ಗುಟ್ಕಾ, ಹುಕ್ಕ ಮೊದಲಾದ ವಸ್ತುಗಳ ಬಳಕೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಹಾಗೆಯೇ ಪ್ಲಾಸ್ಟಿಕ್ ಧ್ವಜವನ್ನು ಉಪಯೋಗಿಸಬೇಡಿ. ಸೂರ್ಯಾಸ್ತದ ನಂತರ ಹಾರಿಸಬಾರದು, ರಾಷ್ಟ್ರಧ್ವಜಕ್ಕೆ ಅವಮಾನ ಅಥವಾ ಅಗೌರವ ತೋರಿಸಬಾರದು ಎಂದು ಸುರೇಶ್ ನಾಗರಿಕರಲ್ಲಿ ಮನವಿ ಮಾಡಿದರು.
ಜಾಥದಲ್ಲಿ ಮಾರುತಿ ವಿದ್ಯಾಮಂದಿರದ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ರೋಟರಿ ಸದಸ್ಯರು ಭಾಗವಹಿಸಿದ್ದರು.