ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ

Rashmi Kasaragodu
Updated On : 14 Aug 2013, 12:23 pm

ತುಮಕೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸತತ 5 ನೇ ಭಾರಿ ಆಯ್ಕೆಯಾಗಿರುವ ಜಿ.ಎಂ.ಸಣ್ಣಮುದ್ದಯ್ಯನವರಿಗೆ ಶಿರಾ ತಾಲೂಕು ಶಿಕ್ಷಕರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ತುಮಕೂರಿನಲ್ಲಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಣ್ಣಮುದ್ದಯ್ಯನವರು ಜಿಲ್ಲೆಯ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಟ್ಟಿದ್ದಾರೆ. ಅಲ್ಲದೆ ನೌಕರರ ಪರವಾಗಿ ಹಲವಾರು ಹೋರಾಟ ಮಾಡಿ, ಉತ್ತಮ  ಆಡಳಿತ ನೀಡಿದ್ದಾರೆ ಎಂದು ನೌಕರರು  ಮೆಚ್ಚುಗೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿದ ಜಿ.ಎಂ. ಸಣ್ಣಮುದ್ದಯ್ಯನವರು ಮಾತನಾಡಿ, ನೌಕರರ ಅಭಿಮಾನಕ್ಕೆ ನಾನು  ಚಿರಋಣಿಯಾಗಿದ್ದೇನೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ನೌಕರರ ಪರ ಹೋರಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿರಾ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಕೆ.ಟಿ. ರುದ್ರಮುನಿ, ನಿರ್ದೇಶಕ ವೈ.ಕಲ್ಲಪ್ಪ, ರಾಜ್ಯ ಪರಿಷತ್ ಮಾಜಿ ಸದಸ್ಯ ಈರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಟಿ.ಎನ್. ಓಂಕಾರೇಶ್ವರ, ಅನಿಲ್ಕುಮಾರ್, ಸಿ.ಆರ್.ಪಿ.ಎಚ್.ಎಚ್.ಗೌಡ, ಶಿಕ್ಷಕರಾದ ತಿಮ್ಮರಾಯಪ್ಪ, ಲಕ್ಷ್ಮೀಕಾಂತ್, ಲೋಕೇಶ್, ಎಸ್.ಎಂ. ಮನು ಇತರರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement